Publish Date: Sat, 27 Aug 2022 (08:49 IST)
Updated Date: Sat, 27 Aug 2022 (08:49 IST)
ರಾಂಚಿ : ವ್ಯಕ್ತಿಯೊಬ್ಬ ಕುಡಿದ ಮತ್ತಲ್ಲಿ ತನ್ನ ತಾಯಿಯನ್ನೇ ಥಳಿಸಿ ಹತ್ಯೆ ಮಾಡಿದ ಘಟನೆ ಜಾರ್ಖಂಡ್ನ ಗುಮ್ಲಾ ಜಿಲ್ಲೆಯಲ್ಲಿ ನಡೆದಿದೆ.
ಜಾರ್ಖಂಡ್ನ ಗುಮ್ಲಾ ಜಿಲ್ಲೆಯ ಸಾರೆದ್ ಗ್ರಾಮದಲ್ಲಿ ಮನೋಜ್ ಚೀಕ್ ಬಡೈಕ್ (28) ಎಂಬಾತ ಕುಡಿದು ಮನೆಗೆ ಬಂದು ತನ್ನ ತಾಯಿ ಮನ್ಮೈತ್ ದೇವಿ(60)ಯನ್ನು ಥಳಿಸಲು ಪ್ರಾರಂಭಿಸಿದ್ದಾನೆ.
ಇದರ ಪರಿಣಾಮವಾಗಿ ಆಕೆ ಸ್ಥಳದಲ್ಲೇ ಮೃತಪಟ್ಟದ್ದಾಳೆ. ಇದಾದ ಬಳಿಕ ಮನೋಜ್ ತನ್ನ ತಾಯಿ ಸಾವನ್ನಪ್ಪಿರುವುದನ್ನು ಗಮನಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಗ್ರಾಮಸ್ಥರು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.