Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊರೋನಾ ಚೇತರಿಸಿಕೊಂಡವರಿಗೆ ಶಾಕ್ ಕೊಟ್ಟಿದೆ ಅಧ್ಯಯನ ವರದಿ!

ಕೊರೋನಾ ಚೇತರಿಸಿಕೊಂಡವರಿಗೆ ಶಾಕ್ ಕೊಟ್ಟಿದೆ ಅಧ್ಯಯನ ವರದಿ!
ಲಂಡನ್ , ಶುಕ್ರವಾರ, 13 ಆಗಸ್ಟ್ 2021 (10:53 IST)
ಲಂಡನ್(ಆ.13): ಕೊರೋನಾದಿಂದ ಚೇತರಿಸಿಕೊಂಡವರಲ್ಲಿ ಬುದ್ಧಿ ಶಕ್ತಿ ಕ್ಷೀಣಿಸುವ ಸಾಧ್ಯತೆಗಳು ಇವೆ. ಸೋಂಕಿತರಿಗೆ ಆಲೋಚನೆ ಮತ್ತು ಗಮನ ಕೇಂದ್ರೀಕರಿಸುವುದರಲ್ಲಿ ಸಮಸ್ಯೆಗಳು ಎದುರಾಗಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

ಎಕ್ಲಿನಿಕಲ್ ಮೆಡಿಸಿನ್ ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನಾ ವರದಿಯ ಪ್ರಕಾರ, ಕೊರೋನಾದ ಗಂಭೀರ ಸ್ವರೂಪದ ರೋಗ ಲಕ್ಷಣದಿಂದ ಚೇತರಿಸಿಕೊಂಡವರು, ಆನ್ಲೈನ್ ಸರಣಿ ಪರೀಕ್ಷೆಯ ಇತರರಿಗೆ ಹೋಲಿಸಿದರೆ ಕಡಿಮೆ ಅಂಕಗಳನ್ನು ಗಳಿಸಿರುವುದು ಹಾಗೂ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವದರಲ್ಲಿ ಹಿಂದೆ ಬಿದ್ದಿರುವುದು ಕಂಡುಬಂದಿದೆ.
ಕೊರೋನಾ ಮೆದುಳು ಮತ್ತು ಮೆದುಳಿನ ಕಾರ್ಯವೈಖರಿಯ ಮೇಲೆ ಯವ ರೀತಿಯಲ್ಲಿ ಪರಿಣಾಮ ಬೀರುತ್ತ ಎಂಬುದನ್ನು ತಿಳಿಯಲು ಸುಮಾರು 80,000 ವ್ಯಕ್ತಿಗಳ ಮೇಲೆ ಅಧ್ಯಯನವನ್ನು ಕೈಗೊಳ್ಳಲಾಗಿತ್ತು. ಈ ವೇಳೆ ಈ ವೇಳೆ ಕೊರೋನಾದಿಂದ ಮೆದುಳಿನ ಮೇಲೆ ಸ್ವಲ್ಪ ಮಟ್ಟಿನ ಪರಿಣಾಮ ಬೀರಿರುವುದು ಕಂಡುಬಂದಿದೆ. ಹೀಗಾಗಿ ಕೊರೋನಾಕ್ಕೂ ಜನರ ಆಲೋಚನಾ ಶಕ್ತಿ ಕ್ಷೀಣಿಸುವುದಕ್ಕೂ ಸಂಬಂಧ ಇದ್ದಿರಬಹುದಾದ ಸಾಧ್ಯತೆ ಇದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ದಲಿತರು, ರೈತರ ‘ಪ್ರವಾಹ’ಕ್ಕೆ ಕೊಚ್ಚಿ ಹೋಗಲಿರುವ ಮೋದಿ: ರಾಹುಲ್ ಕಿಡಿ!