Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶಾರದಾ ಚಿಟ್ ಫಂಡ್ ಪ್ರಕರಣ: ನಳಿನಿ ಚಿದಂಬರಂಗೆ ಸಮನ್ಸ್

ಶಾರದಾ ಚಿಟ್ ಫಂಡ್ ಪ್ರಕರಣ: ನಳಿನಿ ಚಿದಂಬರಂಗೆ ಸಮನ್ಸ್
ನವದೆಹಲಿ , ಬುಧವಾರ, 24 ಆಗಸ್ಟ್ 2016 (17:17 IST)
ಶಾರದಾ ಚಿಟ್ ಫಂಡ್ ಪ್ರಕರಣದಲ್ಲಿ ಹಣ ವಂಚನೆಗೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಮ್ ಅವರ ಪತ್ನಿ ನಳಿನಿ ಚಿದಂಬರಂ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. 

ಮುಂದಿನ ತಿಂಗಳ ಆರಂಭದಲ್ಲಿ ಕೋಲ್ಕತ್ತಾದಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ನಳಿನಿ ಅವರಿಗೆ ಸೂಚನೆ ನೀಡಲಾಗಿದ್ದು, ಪಿಎಮ್ಎಲ್ಎ (Prevention of Money Laundering Act) ಕಾನೂನಿನಡಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುವ ಸಾಧ್ಯತೆಗಳಿವೆ. 
 
ಈ ಹಿಂದೆ ಕೂಡ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ನಳಿನಿಯವರನ್ನು ಪ್ರಶ್ನಿಸಿತ್ತು. ಆದರೆ ಈಗ ಸಿಕ್ಕಿರುವ ಹೊಸ ಸಾಕ್ಷ್ಯಗಳ ಆಧಾರದ ಮೇಲೆ ಅವರಿಗೆ ಸಮನ್ಸ್ ನೀಡಲಾಗಿದೆ. 
 
ಶಾರದಾ ಚಿಟ್ ಫಂಡ್ ಸಂಸ್ಥೆ ನಳಿನಿ ಅವರಿಗೆ ನೀಡಿರುವ ಲೀಗಲ್ ಫೀ ಕುರಿತು ವಿಚಾರಣೆ ನಡೆಸುವ ಸಾಧ್ಯತೆಗಳಿವೆ.
 
ಈ ಹಿಂದೆ ಕೂಡ ಪ್ರಕರಣ ಸಂಬಂಧ ನಳಿನಿ ಚಿದಂಬರಂ ಅವರನ್ನು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ವಿಚಾರಣೆಗೆ ಒಳಪಡಿಸಿತ್ತು. ಕಾಂಗ್ರೆಸ್‌ ನಾಯಕ ಮಂತಾಂಗ್ ಸಿನ್ಹಾ ಅವರ ಪರಿತ್ಯಕ್ತ ಪತ್ನಿ ಮನೋರಂಜನ್‌ ಸಿನ್ಹಾ ಅವರ ಕೋರಿಕೆ ಮೇರೆಗೆ ನಲಿನಿ ಅವರನ್ನು ಶಾರದಾ ಸಂಸ್ಥೆಯ ವಕೀಲೆಯನ್ನಾಗಿ ನೇಮಕ ಮಾಡಿಕೊಳ್ಳಲಾಗಿತ್ತು ಎಂದು ಸದ್ಯ ಜೈಲಿನಲ್ಲಿರುವ ಶಾರದಾ ಮುಖ್ಯಸ್ಥ ಸುದಿಪ್ತ್ ಸೇನ್ ಅವರು ಈ ಹಿಂದೆ ತಿಳಿಸಿದ್ದರು. 
 
ಕಾಂಗ್ರೆಸ್ ನಾಯಕ ಮಂತಾಂಗ್ ಸಿನ್ಹಾ ಅವರ ಪರಿತ್ಯಕ್ತ ಪತ್ನಿ ಮನೋರಂಜನಾ ಸಿಂಗ್ ಅವರ ಕೋರಿಕೆಯ ಮೇರೆಗೆ ನಳಿನಿ ಅವರನ್ನು ತಮ್ಮ ಸಂಸ್ಥೆಯ ವಕೀಲೆಯನ್ನಾಗಿ ನೇಮಿಸಲಾಗಿತ್ತು ಎಂದು ಶಾರದಾ ಚಿಟ್ ಫಂಡ್ ಮುಖ್ಯಸ್ಥರಾದ ಸುದಿಪ್ತಾ ಸೇನ್ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರಿಂದಲೇ ಕೋಟಿ ಕೋಟಿ ಹಣ ಲೂಟಿ?