Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪೊಲೀಸರಿಂದಲೇ ಕೋಟಿ ಕೋಟಿ ಹಣ ಲೂಟಿ?

ಪೊಲೀಸರಿಂದಲೇ ಕೋಟಿ ಕೋಟಿ ಹಣ ಲೂಟಿ?
ಬೆಂಗಳೂರು , ಬುಧವಾರ, 24 ಆಗಸ್ಟ್ 2016 (17:13 IST)
ಕ್ಲಬ್‌ವೊಂದರ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಅಲ್ಲಿ ದೊರೆತ ಎರಡು ಕೋಟಿ ರೂಪಾಯಿ ಹಣವನ್ನು ನುಂಗಿ ನೀರು ಕುಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
 
ಇಂದಿರಾನಗರದಲ್ಲಿರುವ ಪೋಕರ್ಸ್ ಕ್ಲಬ್ ಮೇಲೆ ಅಗಸ್ಟ್ 6 ರಂದು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಕ್ಲಬ್‌ನ ಕೆಳ ಮಹಡಿಯಲ್ಲಿ 1.5 ಕೋಟಿ ಹಾಗೂ ಕ್ಲಬ್‌ನ ಮೇಲ್ಮಹಡಿಯಲ್ಲಿ 1 ಕೋಟಿ ರೂಪಾಯಿ ಹಣವನ್ನು ರೈಡ್ ಮಾಡಿ, 180 ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಪ್ರಕರಣದಲ್ಲಿ ಕೇವಲ 8.5 ಲಕ್ಷವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಮೂದಿಸುವ ಮೂಲಕ ಜಪ್ತಿ ಮಾಡಿದ್ದ 2 ಕೋಟಿ ರೂಪಾಯಿ ಹಣವನ್ನು ನುಂಗಿದ್ದಾರೆ. 
 
ಬಂಧಿತ ಆರೋಪಿಗಳನ್ನು ನಾಮಕಾವಾಸ್ತೆ ಎನ್ನುವಂತೆ ಜೀವನ ಭೀಮಾ ನಗರ ಪೊಲೀಸ್ ಠಾಣೆಗೆ ಕರೆದೊಯ್ದು, ಪ್ರಕರಣ ದಾಖಲಿಸಿಕೊಳ್ಳದೆ ಬಿಟ್ಟು ಕಳುಹಿಸಿದ್ದರು ಎಂದು ಹೇಳಲಾಗುತ್ತದೆ.
 
ಪ್ರಕರಣದ ಕುರಿತು ಹಿರಿಯ ಐಪಿಎಸ್ ಅಧಿಕಾರಿಗಳ ಗಮನಕ್ಕೆ ಬಂದ ನಂತರ ಪೋಕರ್ಸ್ ಕ್ಲಬ್ ಮಾಲೀಕ ಸಂತೋಷ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಸತ್ಯ ಸಂಗತಿ ಬಹಿರಂಗವಾಗಿದೆ.
 
 ರೈಡ್ ಮಾಡಿರುವ ಹಣದ ಕುರಿತು ಬಾಯಬಿಡದಂತೆ ಪೋಕರ್ಸ್ ಕ್ಲಬ್ ಮಾಲೀಕ ಸಂತೋಷ್ ಅವರಿಗೆ ಭ್ರಷ್ಟ ಪೊಲೀಸರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
 
ಗೃಹ ಸಚಿವರ ಹೇಳಿಕೆ........
 
ಇಂದಿರಾನಗರದ ಪೋಕರ್ಸ್ ಕ್ಲಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಎರಡು ಕೋಟಿ ಹಣವನ್ನು ಲೂಟಿ ಮಾಡಿರುವ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಹಗರಣ ನಡೆದಿದ್ದೆ ಆದರೆ, ಪೊಲೀಸ್ ಆಯುಕ್ತರು ತನಿಖೆ ಕೈಗೊಳ್ಳುತ್ತಾರೆ. ಪ್ರಕರಣದಲ್ಲಿ ಯಾವುದೇ ಅಧಿಕಾರಿ ಭಾಗಿಯಾಗಿದ್ದರು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ. 

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಮಯನ್ಮಾರ್‌ನಲ್ಲಿ 6.8 ತೀವ್ರತೆಯ ಭೂಕಂಪ, ಬಂಗಾಳ್, ಬಿಹಾರ್, ಆಸ್ಸಾಂನಲ್ಲೂ ಕಂಪನದ ಅನುಭವ