Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸತತ 5ನೇ ಬಾರಿ ರೆಪೋ ರೇಟ್‌ ಹೆಚ್ಚಳ !

ಸತತ 5ನೇ ಬಾರಿ ರೆಪೋ ರೇಟ್‌ ಹೆಚ್ಚಳ !
ನವದೆಹಲಿ , ಗುರುವಾರ, 8 ಡಿಸೆಂಬರ್ 2022 (09:06 IST)
ನವದೆಹಲಿ : ಸತತ ಐದನೇ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರದಿಂದ ತಕ್ಷಣದಿಂದ ಜಾರಿಗೆ ಬರುವಂತೆ ರೆಪೊ ದರವನ್ನು 35 ಬೇಸಿಸ್ ಪಾಯಿಂಟ್ (ಬಿಪಿಎಸ್) ಹೆಚ್ಚಿಸಿದೆ.

ಈ ನಿರ್ಧಾರದಿಂದ ರೆಪೋ ದರ ಶೇ. 6.25ಕ್ಕೆ ಏರಿಕೆಯಾದಂತಾಗಿದೆ. ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು ಸಭೆ ನಡೆಸಿ ರೆಪೋ ದರವನ್ನು ಏರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಈ ದರವು ಆಗಸ್ಟ್ 2018 ರಿಂದ ಅತ್ಯಧಿಕ ಮಟ್ಟದಾಗಿದೆ.

ಇತ್ತೀಚಿನ ಏರಿಕೆಯೊಂದಿಗೆ, ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಆರ್ಬಿಐ ಈ ವರ್ಷ ಒಟ್ಟಾರೆಯಾಗಿ 225 ಬೇಸಿಸ್ ಪಾಯಿಂಟ್ ಏರಿಕೆ ಮಾಡಿದೆ.

ಹಿಂದಿನ ಮೂರು ನೀತಿ ಪರಾಮರ್ಶೆಗಳಲ್ಲಿ ತಲಾ 50 ಬಿಪಿಎಸ್ ಹೆಚ್ಚಳವಾಗಿದ್ದರೆ ಮೇ ತಿಂಗಳಿನಲ್ಲಿ 40 ಬಿಪಿಎಸ್ ಏರಿಕೆಯಾಗಿತ್ತು. ಈ ಹೆಚ್ಚಳಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಳದ ಪ್ರಮಾಣ ಕಡಿಮೆಯಾಗಿದೆ. ರೆಪೋ ದರ ಏರಿಕೆಯಾದ ಕಾರಣ ಗೃಹ, ವಾಹನ ಸಾಲದ ಬಡ್ಡಿ ದರ ಏರಿಕೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತೆರಿಗೆ ವಂಚನೆ : ಟ್ರಂಪ್ ಕುಟುಂಬದ ಸಂಸ್ಥೆಗೆ ದಂಡ