Webdunia - Bharat's app for daily news and videos

Install App

ಸರ್ಕಾರಿ ಗೌರವದೊಂದಿಗೆ ರತನ್ ಟಾಟಾ ಅಂತ್ಯಕ್ರಿಯೆ, ಮಹಾರಾಷ್ಟ್ರದಲ್ಲಿ ಶೋಕಾಚರಣೆ: ಶಿಂಧೆ

Sampriya
ಗುರುವಾರ, 10 ಅಕ್ಟೋಬರ್ 2024 (09:50 IST)
Photo Courtesy X
ಮುಂಬೈ: ಬುಧವಾರ ತಡರಾತ್ರಿ ನಿಧನರಾದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ತಿಳಿಸಿದ್ದಾರೆ.

ಟಾಟಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಗುರುವಾರ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ದಕ್ಷಿಣ ಮುಂಬೈನ ರಾಷ್ಟ್ರೀಯ ಲಿಲಿತ ಕಲಾ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬುಧವಾರ ಬೆಳಿಗ್ಗೆ ಅವರ ಆರೋಗ್ಯಸ್ಥಿತಿಯಲ್ಲಿ ಏರುಪೇರು ಕಾಣಿಸಿಕೊಂಡ ಕಾರಣ ಅವರನ್ನು ಮುಂಬೈನ ಬ್ರೀಚ್‌ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ ಸುಮಾರಿಗೆ 11.30 ಗಂಟೆಗೆ ಅವರು ನಿಧನರಾದರು.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಶಿಂದೆ, ಟಾಟಾ ಎಂದರೆ ನೈತಿಕತೆ ಮತ್ತು ಉದ್ಯಮಶೀಲತೆಯ ವಿಶಿಷ್ಟ ಮಿಶ್ರಣ. 150 ವರ್ಷಗಳ ಹಳೆಯದಾದ ಟಾಟಾ ಸಮೂಹವನ್ನು ಯಶಸ್ವಿಯಾಗಿ ಮುನ್ನಡೆಸಿದ ಜೀವಂತ ದಂತಕಥೆಯಾಗಿದ್ದರು. ಟಾಟಾ ಅವರಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯದಲ್ಲಿ ಇಂದು ಒಂದು ದಿನದ ಶೋಕಾಚರಣೆ ಇರಲಿದ್ದು, ಯಾವುದೇ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಶಿಂದೆ ತಿಳಿಸಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಧನಾ ಸಮಾವೇಶದಲ್ಲಿ ಸಿಎಂ ಈ ಪ್ರಶ್ನೆಗೆಲ್ಲ ಉತ್ತರಿಸಬೇಕು: ಎಚ್‌ ವಿಶ್ವನಾಥ್‌

DK Shivakumar: ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ವರಸೆಯೇ ಬದಲಿಸಿದ ಡಿಕೆ ಶಿವಕುಮಾರ್

ಬಿಡದಿಯ ಮೂಕ ಬಾಲಕಿಯ ಹತ್ಯೆ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್‌, ಸಿಸಿಟಿವಿಯಲ್ಲಿ ಸೆರೆಯಾಯಿತು ಸಾವಿನ ಅಸಲಿ ಕಾರಣ

ಏನ್ರಿ ಅದು ಕ್ಷಮೆ, ಮೊದಲು ನಡತೆಯಲ್ಲಿ ಬದಲು ಮಾಡಿಕೊಳ್ಳಿ: ಸೋಫಿಯಾ ಖುರೇಷಿ ವಿರುದ್ಧದ ಹೇಳಿಕೆಗೆ ವಿಜಯ್ ಶಾಗೆ ಗದರಿದ ಸುಪ್ರೀಂ

ನಾವು ಎಲ್ಲಿ ಪ್ರತಿ ತಿಂಗಳು ಹಣ ಕೊಡ್ತೀವಿ ಅಂತಾ ಹೇಳಿದ್ವಿ: ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments