ದಿಸ್ಪುರ್ : ಸಿಬಿಐ ಅಧಿಕಾರಿಗಳಂತೆ ನಟಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರನ್ನು ಅಸ್ಸಾಂ ಪೊಲೀಸರು ಶುಕ್ರವಾರ ಕರೀಂಗಂಜ್ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ದಿಲ್ವಾರ್ ಹುಸೇನ್ ಮತ್ತು ರಶೀದ್ ಅಹ್ಮದ್ ಎಂದು ಗುರುತಿಸಲಾಗಿದೆ. ಆಗಸ್ಟ್ 18 ರಂದು ಪಥರ್ಕಂಡಿ ಪ್ರದೇಶದ ಉದ್ಯಮಿಯೊಬ್ಬರು ಈ ಬಗ್ಗೆ ದೂರು ನೀಡಿರುವುದಾಗಿ ಕರೀಂಗಂಜ್ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪಾರ್ಥ ಪ್ರತಿಮ್ ದಾಸ್ ತಿಳಿಸಿದ್ದಾರೆ.
ಉದ್ಯಮಿಗೆ ಸುಲಿಗೆ ಕರೆ ಬಂದಿದ್ದು, ಸಿಬಿಐ ಅಧಿಕಾರಿಯಂತೆ ನಟಿಸುತ್ತಿದ್ದ ವ್ಯಕ್ತಿ 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ.
ಈ ಕೃತ್ಯವೆಸಗಲು ರಶೀದ್ ಅಹ್ಮದ್, ದಿಲ್ವಾರ್ ಹುಸೇನ್ನ ಮೊಬೈಲ್ ಫೋನ್ ಬಳಸಿದ್ದಾನೆ. ಅಲ್ಲದೇ ಹಣಕ್ಕಾಗಿ ಸಿಬಿಐ ಅಧಿಕಾರಿಯಂತೆ ನಟಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.