Publish Date: Sat, 14 Mar 2020 (09:22 IST)
Updated Date: Sat, 14 Mar 2020 (09:25 IST)
ಮೈನ್ ಪುರಿ: ಅತ್ಯಾಚಾರದ ವಿರುದ್ಧ ಎಷ್ಟೇ ಕಾನೂನು ರೂಪಿಸಿದರೂ ಅದು ನಿಲ್ಲುವ ಸೂಚನೆ ಮಾತ್ರ ಕಾಣುತ್ತಿಲ್ಲ. ಅದರಲ್ಲೂ ಪುಟ್ಟ ಮಕ್ಕಳೇ ಕಾಮಪಿಪಾಸುಗಳಿಗೆ ಆಹಾರವಾಗುತ್ತಿರುವುದು ಖೇದಕರ.
ಅಂತಹದ್ದೇ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 10 ವರ್ಷದ ಬಾಲಕಿಯನ್ನು ನೆರೆಮನೆಯ ಯುವಕ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಲ್ಲದೆ, ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಆರೋಪಿ 23 ವರ್ಷದ ಮನೋಜ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದ್ದು, ಈತನ ಪರಿಚಯವಿದ್ದ ಕಾರಣ ಬಾಲಕಿ ಆತ ಕರೆದಾಗ ಮರುಮಾತಿಲ್ಲದೇ ಜತೆ ಹೋಗಿದ್ದಳು. ಆದರೆ ವೃತ್ತಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಮನೋಜ್ ತಾನು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಕರೆದೊಯ್ದು ಈ ಕೃತ್ಯವೆಸಗಿದ್ದಾನೆ.