Publish Date: Fri, 13 Mar 2020 (10:35 IST)
Updated Date: Fri, 13 Mar 2020 (10:38 IST)
ಹೈದರಾಬಾದ್: ಕಾಮಾತುರಣಾಂ ನ ಭಯಂ, ನ ಲಜ್ಜಾಂ ಎಂಬ ಮಾತನ್ನು ಈ ವ್ಯಕ್ತಿ ನಿಜ ಮಾಡಿದ್ದಾನೆ. ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಸಾಮಾನ್ಯವಾಗುತ್ತಿರುವ ಬೆನ್ನಲ್ಲೇ ವ್ಯಕ್ತಿಯೊಬ್ಬ ಲೈಂಗಿಕ ತೃಷೆ ತೀರಿಸಲು ಕರುವನ್ನು ಬಳಸಿಕೊಂಡ ಘಟನೆ ವರದಿಯಾಗಿದೆ.
ಹೈದರಾಬಾದ್ ನ ಮಹೇಶ್ ಎಂಬಾತ ಆರೋಪಿ. ಈತ ಕಳೆದ ಕೆಲವು ದಿನಗಳಿಂದ ಒಂಭತ್ತು ತಿಂಗಳ ಕರುವವನ್ನು ತನ್ನ ಕಾಮದಾಹ ತೀರಿಸಿಕೊಳ್ಳಲು ಬಯಸುತ್ತಿದ್ದ ಎನ್ನಲಾಗಿದೆ.
ಈತನ ದುಷ್ಕೃತ್ಯವನ್ನು ಕಣ್ಣಾರೆ ಕಂಡ ನೆರೆಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಇದೀಗ ಆತನನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಕರುವನ್ನೂ ಪಶು ಆಸ್ಪತ್ರೆಗೆ ಒಯ್ದು ಪರೀಕ್ಷಿಸಲಾಗಿದೆ.