Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೊಸ ವರ್ಷದಂದು ದೇಶದ ಜನತೆಗೆ ರೈಲ್ವೇ ಶಾಕ್

ಹೊಸ ವರ್ಷದಂದು ದೇಶದ ಜನತೆಗೆ ರೈಲ್ವೇ ಶಾಕ್
ನವದೆಹಲಿ , ಬುಧವಾರ, 1 ಜನವರಿ 2020 (11:22 IST)
ನವದೆಹಲಿ: ಹೊಸ ವರ್ಷದ ದಿನವೇ ದೇಶದ ಜನತೆಗೆ ರೈಲ್ವೇ ಇಲಾಖೆ ಶಾಕ್ ನೀಡಿದೆ. ರೈಲು ಪ್ರಯಾಣ ದರವನ್ನು ಹೆಚ್ಚಳ ಮಾಡಲಾಗಿದೆ.


ಸಬ್ ಅರ್ಬನ್ ರೈಲುಗಳನ್ನು ಹೊರತುಪಡಿಸಿ ಉಳಿದೆಲ್ಲಾ ರೈಲು ಸೇವೆಗಳ ದರದಲ್ಲಿ ಪ್ರತೀ ಕಿ.ಮೀ.ಗೆ 1 ಪೈಸೆ ಹೆಚ್ಚಳ ಮಾಡಲಾಗಿದೆ. ಈ ನೂತನ ದರ ಇಂದಿನಿಂದಲೇ ಜಾರಿಯಾಗಲಿದೆ.

ಆದರೆ ಈಗಾಗಲೇ ರಿಸರ್ವೇಷನ್ ಆದ ಟಿಕೆಟ್ ದರದಲ್ಲಿ ವ್ಯತ್ಯಾಸವಾಗುವುದಿಲ್ಲ. ಉಳಿದಂತೆ ಸಾಮಾನ್ಯ ಎಸಿ ರಹಿತ, ನಾನ್ ಸಬ್ ಅರ್ಬನ್ ರೈಲುಗಳಲ್ಲಿ ಪ್ರತೀ. ಕಿ.ಮೀ.ಗೆ 1 ಪೈಸೆ ಹೆಚ್ಚಳವಾದರೆ, ಮೇಲ್/ಎಕ್ಸ್ ಪ್ರೆಸ್, ನಾನ್ ಎಸಿ ರೈಲುಗಳ ದರದಲ್ಲಿ ಪ್ರತೀ ಕಿ. ಮೀ.ಗೆ 2 ಪೈಸೆಯಂತೆ ಹೆಚ್ಚಳವಾಗಿದೆ. ಶತಾಬ್ಧಿ, ರಾಜಧಾನಿ, ತುರಂತೋ ರೈಲುಗಳಲ್ಲೂ ಈ ದರ ಜಾರಿಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತೆಗೆ ತಾಳಿ ಕಟ್ಟಿದ ಪ್ರೇಮಿ ಆಮೇಲೆ ಮಾಡಿದ್ದೇನು?