Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇನ್ನು 15 ವರ್ಷದಲ್ಲಿ ಅಮೇಠಿಯನ್ನು ಸಿಂಗಾಪುರ್ ಮಾಡ್ತಾರಂತೆ ರಾಹುಲ್ ಗಾಂಧಿ

ಇನ್ನು 15 ವರ್ಷದಲ್ಲಿ ಅಮೇಠಿಯನ್ನು ಸಿಂಗಾಪುರ್ ಮಾಡ್ತಾರಂತೆ ರಾಹುಲ್ ಗಾಂಧಿ
ನವದೆಹಲಿ , ಗುರುವಾರ, 19 ಏಪ್ರಿಲ್ 2018 (08:34 IST)
ನವದೆಹಲಿ: ಇನ್ನು 10-15 ವರ್ಷಗಳಲ್ಲಿ ಅಮೇಠಿಯನ್ನು ಸಿಂಗಾಪುರ್ ಅಥವಾ ಅಮೆರಿಕಾದ ಕ್ಯಾಲಿಫೋರ್ನಿಯಾ ನಗರದಷ್ಟು ಆಧುನೀಕರಣಗೊಳಿಸುವುದಾಗಿ ಆ ಕ್ಷೇತ್ರ ಸಂಸದರೂ ಆಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ನಾವು ಅಮೇಠಿಗಾಗಿ ದೊಡ್ಡ ದೊಡ್ಡ ಯೋಜನೆಗಳನ್ನು ತಂದಿದ್ದೆವು. ಆದರೆ ಈಗಿನ ಕೇಂದ್ರ ಸರ್ಕಾರ ಅದಕ್ಕೆಲ್ಲಾ ಕಲ್ಲು ಹಾಕಿದೆ. ಹಾಗಿದ್ದರೂ ಮುಂದಿನ 15 ವರ್ಷದಲ್ಲಿ ಅದನ್ನೆಲ್ಲಾ ಮರಳಿ ತಂದು ಜನರು ಕ್ಯಾಲಿಫೋರ್ನಿಯಾ, ಸಿಂಗಾಪುರ ನಗರಗಳ ಗುಣಮಟ್ಟದ ಬಗ್ಗೆ ಮಾತನಾಡುವಾಗ ಅಮೇಠಿಯನ್ನೂ ಅದೇ ಪಟ್ಟಿಯಲ್ಲಿ ಸೇರಿಸುವಂತೆ ಮಾಡುತ್ತೇನೆ’ ಎಂದು ರಾಹುಲ್ ಹೇಳಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ‘ಹಿಂದಿನ ಪ್ರಧಾನಿಗಳಾದ ಜವಹರ್ ಲಾಲ್ ನೆಹರೂ ಅಥವಾ ಬಿಜೆಪಿಯವರೇ ಆದ ವಾಜಪೇಯಿ ಅವರನ್ನೇ ನೋಡಿ. ಅವರೆಲ್ಲಾ ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದರು. ಆದರೆ ಹಾಲಿ ಪ್ರಧಾನಿಗಳು ಯಾವತ್ತೂ ಹಳೆಯದನ್ನು ಕೆದಕಿ ಧ್ವೇಷದ ಬೀಜ ಹರಡುತ್ತಿದ್ದಾರೆ’ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಬಿಐ ಗವರ್ನರ್ ಗೆ ತುರ್ತು ಬುಲಾವ್ ನೀಡಿದ ಸಂಸತ್ ಸಮಿತಿ