ನವದೆಹಲಿ: ಇತ್ತೀಚೆಗೆ ನಡೆದ ಬ್ಯಾಂಕ್ ಹಗರಣಗಳ ಬಗ್ಗೆ ವಿಚಾರಣೆ ನಡೆಸಲು ತಕ್ಷಣವೇ ತಮ್ಮ ಎದುರು ಹಾಜರಾಗುವಂತೆ ಎಂ ವೀರಪ್ಪ ಮೊಯಿಲಿ ನೇತೃತ್ವದ ಸಂಸತ್ತಿನ ಆರ್ಥಿಕ ಸಮಿತಿ ಸೂಚನೆ ನೀಡಿದೆ.
‘ಮೇ 17 ರಂದು ತಜ್ಞರ ಸಮಿತಿ ಎದುರು ಹಾಜರಾಗಲು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಗೆ ಸೂಚಿಸಿದ್ದೇವೆ. ಅವರ ಬಳಿ ಇತ್ತೀಚೆಗಿನ ಬ್ಯಾಂಕಿಂಗ್ ಹಗರಣಗಳು ಮತ್ತು ಹಣಕಾಸು ವ್ಯವಹಾರಗಳ ಕುರಿತು ವಿಚಾರಣೆ ನಡೆಸಲಿದ್ದೇವೆ’ ಎಂದು ತಜ್ಞರ ಸಮಿತಿ ಹೇಳಿದೆ.
ಉದ್ಯಮಿ ನೀರವ್ ಮೋದಿ ಪ್ರಕರಣ ಸೇರಿದಂತೆ ಬ್ಯಾಂಕಿಂಗ್ ವ್ಯವಹಾರದಲ್ಲಿ ನಡೆದ ಅವ್ಯವಹಾರಗಳ ಕುರಿತು ಈ ಸಮಿತಿ ತನಿಖೆ ನಡೆಸಲಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ಈ ಸಮಿತಿಯ ಸದಸ್ಯರಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.