ಪುಣೆ: ರಸ್ತೆಯಲ್ಲಿ ಸಿಕ್ಕ ಸಿಕ್ಕಲ್ಲಿ ಉಗುಳುವುದು ನಮ್ಮ ದೇಶದಲ್ಲಿ ಹೊಸತೇನಲ್ಲ. ಆದರೆ ಪುಣೆಯಲ್ಲಿ ಇಂತಹ ಉಗುಳುಕೋರರಿಗೆ ನಗರ ಪಾಲಿಕೆ ತಕ್ಕ ದಂಡನೆಯನ್ನೇ ಕಾದಿರಿಸಿದೆ!
ಅದೇನು ಗೊತ್ತಾ? ಪುಣೆಯನ್ನು ಕ್ಲೀನ್ ಸಿಟಿ ಮಾಡಲು ಪಣ ತೊಟ್ಟಿರುವ ನಗರ ಪಾಲಿಕೆ ಇಲ್ಲಿನ ರಸ್ತೆಯಲ್ಲಿ ಉಗುಳಿದರೆ ಉಗುಳಿದವರ ಕೈಯಲ್ಲೇ ಕ್ಲೀನ್ ಮಾಡಿಸಿ ದೊಡ್ಡ ಪ್ರಮಾಣದ ದಂಡ ವಿಧಿಸಲು ಕಾನೂನೊಂದನ್ನು ರೂಪಿಸಿದೆ.
ಕಳೆದ ಒಂದು ವಾರದಲ್ಲಿ ಈ ರೀತಿ ಉಗುಳಿದ ಸುಮಾರು 150 ಮಂದಿಗೆ ಈ ಶಿಕ್ಷೆಯನ್ನು ನೀಡಲಾಗಿದೆಯಂತೆ. ಉಗುಳಿದ್ದನ್ನು ಶುಚಿಗೊಳಿಸಿದ್ದಲ್ಲದೆ, 150 ರೂ. ದಂಡವನ್ನೂ ತೆರಬೇಕಾಯಿತಂತೆ. ಹೀಗಾಗಿ ಪುಣೆಯ ರಸ್ತೆಯಲ್ಲಿ ಓಡಾಡುವ ಮುನ್ನ ಎಚ್ಚರ ವಹಿಸುವುದು ಒಳ್ಳೆಯದು. ಈ ನಿಯಮ ನಮ್ಮಲ್ಲೂ ಜಾರಿಗೆ ಬಂದರೆ ಒಳ್ಳೆಯದೇ ಬಿಡಿ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.