ನವದೆಹಲಿ: ಈಗಿನ ಕಾಲದಲ್ಲಿ ಮನುಷ್ಯರಷ್ಟೇ ಪ್ರಾಣಿಗಳನ್ನೂ ಇಷ್ಟಪಡುವವರಿದ್ದಾರೆ. ಹೀಗಾಗಿ ತಮ್ಮ ಪ್ರಿಯ ನಾಯಿಗಳು ಸತ್ತರೆ ಅವುಗಳ ಅಂತ್ಯ ಸಂಸ್ಕಾರ ನಡೆಸಲೆಂದೇ ದೆಹಲಿಯಲ್ಲಿ ಸ್ಮಶಾನವೊಂದು ರೆಡಿ ಆಗುತ್ತಿದೆ.
ದಕ್ಷಿಣ ದೆಹಲಿ ನಗರ ಪಾಲಿಕೆ ನಿರ್ಮಿಸುತ್ತಿರುವ ಈ ಸ್ಮಶಾನದಲ್ಲಿ ನಾಯಿಗಳನ್ನು ಮಣ್ಣು ಮಾಡಲಷ್ಟೇ ಜಾಗವಲ್ಲ, ಅವುಗಳ ಶ್ರಾದ್ಧ ನೆರವೇರಿಸಲು ಪುರೋಹಿತರು, ಪ್ರಾರ್ಥನಾ ಕೊಠಡಿ ಎಲ್ಲವೂ ಇರಲಿದೆ!
ದ್ವಾರಕಾ ಸೆಕ್ಟರ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸ್ಮಶಾನ 2019 ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆಯಂತೆ. ಆ ಮೂಲಕ ತಮ್ಮ ಪ್ರೀತಿ ಪಾತ್ರ ಶ್ವಾನಗಳಿಗೆ ಗೌರವಯುತ ವಿದಾಯ ಹೇಳಲು ನಗರ ಪಾಲಿಕೆ ಅವಕಾಶ ಮಾಡಿಕೊಡುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.