ನವದೆಹಲಿ : ಇಂದು ಪಾರದರ್ಶಕ ತೆರಿಗೆ ವೇದಿಕೆಗೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದಾರೆ.
ಬಳಿಕ ವಿಡಿಯೋ ಕಾನ್ಫರೆನ್ಸ್ ನ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ತೆರಿಗೆ ಪಾವತಿಯ ವಿಧಾನ ಮತ್ತಷ್ಟು ಜನಸ್ನೇಹಿ ಆಗುತ್ತಿದೆ. ಯಾವ ಕಾರಣಕ್ಕೂ ಅಡ್ಡದಾರಿ ಹಿಡಿಯದಂತೆ ಸಲಹೆ. ತೆರಿಗೆ ವಂಚನೆಯಲ್ಲಿ ನಿಮ್ಮನ್ನ ನೀವು ತೊಡಗಿಸಿಕೊಳ್ಳಬೇಡಿ. ತೆರಿಗೆ ವಂಚನೆಯಿಂದ ಕೇವಲ ದೇಶಕ್ಕೆ ಮಾತ್ರವಲ್ಲ. ನಿಮಗೇ ನೀವು ದ್ರೋಹ ಬಗೆದುಕೊಂಡಂತೆ. ನೀವು ಪಾವತಿಸುವ ತೆರಿಗೆಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಸಲಹೆ ನೀಡಿದ್ದಾರೆ.
ಪ್ರಾಮಾಣಿಕ ತೆರಿಗೆದಾರರನ್ನ ಸರ್ಕಾರ ಗುರುತಿಸಿ ಗೌರವಿಸುತ್ತೆ. ಒಂದು ಸುಧಾರಣೆ ಮತ್ತೊಂದು ಸುಧಾರಣೆಗೆ ಮಾರ್ಗವಾಗುತ್ತೆ. ದೇಶದಲ್ಲಿ ಇದ್ದ ಹಳೆಯ ಕಾನೂನುಗಳನ್ನು ರದ್ದು ಮಾಡಿದ್ದೇವೆ. ಉದ್ಯಮ ಸರಳೀಕರಣ ನೀತಿಯನ್ನು ಜಾರಿಗೆ ತಂದಿದ್ದೇವೆ. ತೆರಿಗೆ ನೀತಿಯಲ್ಲಿ ಬದಲಾವಣೆಯಾಗುತ್ತಲೇ ಇರುತ್ತೆ ಎಂದು ಅವರು ತಿಳಿಸಿದ್ದಾರೆ.