Publish Date: Fri, 07 Aug 2020 (21:12 IST)
Updated Date: Fri, 07 Aug 2020 (21:15 IST)
ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ಪ್ರಪಂಚದಲ್ಲಿ ಹರಡಿಕೊಂಡ ಬಳಿಕ ಎಲ್ಲ ಉದ್ಯಮಗಳಂತೆ ಚಿತ್ರೋದ್ಯಮವು ಬಿಕ್ಕಟ್ಟಿಗೆ ಸಿಲುಕಿತ್ತು.
ಈಗ, ಚಿತ್ರಮಂದಿರಗಳು ಮತ್ತೆ ತೆರೆಯುವುದರೊಂದಿಗೆ, ಚಲನಚಿತ್ರ ನಿರ್ಮಾಪಕರು ತಮ್ಮ ಚಲನಚಿತ್ರಗಳನ್ನು ಬಿಡುಗಡೆ ಮಾಡಲು ನಿರ್ಧರಿಸುತ್ತಿದ್ದಾರೆ.
ಆಲಿಯಾ ಭಟ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಚಿತ್ರ ಬಿಡುಗಡೆಯ ಬಗ್ಗೆ ಹೇಳಿಕೊಂಡಿದ್ದಾರೆ.
ಮುಂದಿನ ಪ್ರಾಜೆಕ್ಟ್ ಸಡಕ್ 2 ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ಇದರಲ್ಲಿ ಆದಿತ್ಯ ರಾಯ್ ಕಪೂರ್, ಸಂಜಯ್ ದತ್ ಮತ್ತು ಪೂಜಾ ಭಟ್ ನಟಿಸಿದ್ದಾರೆ.
ಸಡಕ್ 2, ಆಗಸ್ಟ್ 28 ರಂದು ಬಿಡುಗಡೆಗೊಳ್ಳಲಿದೆ ಎಂದು ಆಲಿಯಾ ಭಟ್ ತಿಳಿಸಿದ್ದಾರೆ.