ಪೌರತ್ವ ತಿದ್ದುಪಡಿ ಮಸೂದೆಗೆ ಉಭಯ ಸದನಗಳಲ್ಲಿ ಅಂಗೀಕಾರ ದೊರೆತ ಹಿನ್ನಲೆಯಲ್ಲಿ ಅಸ್ಸಾಂನಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಅಸ್ಸಾಂ ಜನರ ಸಂಸ್ಕೃತಿ, ಹಕ್ಕು ಕಾಪಾಡುವಲ್ಲಿ ಸರ್ಕಾರ ಬದ್ಧ. ಅಸ್ಸಾಂ ಜನರ ಹಿತವನ್ನು ಕಾಪಾಡುತ್ತೇವೆ. ಅಸ್ಸಾಂ ಜನರ ಭೂಮಿ ಹಕ್ಕು ಸುರಕ್ಷಿತವಾಗಿರಲಿದೆ. ನಿಮ್ಮ ಅಧಿಕಾರ, ಹಕ್ಕನ್ನು ಯಾರೂ ಕಸಿದುಕೊಳ್ಳಲು ಆಗಲ್ಲ” ಎಂದು ತಿಳಿಸಿದ್ದಾರೆ.