ನವದೆಹಲಿ : 40 ವರ್ಷದ ಮಹಿಳೆಯೊಬ್ಬಳು 4 ವರ್ಷಗಳಿಂದ ತನ್ನ ಮೇಲೆ ಸೋದರ ಮಾವ ಅತ್ಯಾಚಾರ ಎಸಗುತ್ತಿದ್ದಾನೆ ಎಂದು ಆರೋಪಿಸಿ ದೆಹಲಿ ಕೋರ್ಟ್ ನ ಮೊರೆ ಹೋಗಿದ್ದಾಳೆ.
ತಾನು ನಾಲ್ಕು ವರ್ಷದವಳಾಗಿದ್ದಾಗಿನಿಂದಲೂ ಆತ ತನ್ನ ಮೇಲೆ ಅತ್ಯಾಚಾರ ಎಸಗಿದ್ದು, ನಂತರ ತನ್ನ ಸೋದರಿಯನ್ನು ಮದುವೆಯಾಗಿ ತಮ್ಮ ಮನೆಯಲ್ಲೇ ವಾಸವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರಿಂದ ತಾನು 3 ಶಸ್ತ್ರಚಿಕಿತ್ಸೆ ಒಳಗಾಗಿದ್ದೇನೆ. ಈ ಬಗ್ಗೆ ನಮ್ಮ ಕುಟುಂಬದವರಿಗೆ ಹೇಳಿದರೂ ಅವರು ಯಾರಿಗೆ ಹೇಳಬೇಡ ಎಂದು ಬೆದರಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಈ ಹಿನ್ನಲೆಯಲ್ಲಿ ಮಹಿಳೆ ಕೋರ್ಟ್ ನ ಮೊರೆ ಹೋದ ಹಿನ್ನಲೆ ಈಗಾಗಲೇ ವಿಚಾರಣೆ ಎದುರಿಸುತ್ತಿರುವ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ ಗಳಡಿ ಅತ್ಯಾಚಾರ ಹಾಗೂ ಬೆದರಿಕೆ ಒಡ್ಡಿದರ ಆಧಾರದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ ಎನ್ನಲಾಗಿದೆ.