ಹೈದರಾಬಾದ್: ಇಲ್ಲಿ ಅಂಗಡಿ ಮಾಲಿಕನೊಬ್ಬನನ್ನು ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 18 ಮಂದಿಯನ್ನು ಬಂಧಿಸಿದ್ದಾರೆ.
ಡಿಸೆಂಬರ್ 31 ರಂದು 33 ವರ್ಷದ ನರಸಿಂಹ ರೆಡ್ಡಿ ಎಂಬವರ ಕೊಲೆಯಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 21 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, 18 ಮಂದಿಯನ್ನು ಬಂಧಿಸಿದ್ದಾರೆ.
ನರಸಿಂಹ ರೆಡ್ಡಿ ಈ ದಿನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ. ಈ ವೇಳೆ ನರಸಿಂಹ ರೆಡ್ಡಿ ಮತ್ತು ಅಲ್ಲಿಯೇ ಹೊಸ ವರ್ಷಾಚರಣೆ ಮಾಡುತ್ತಿದ್ದ ಇನ್ನೊಂದು ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ನರಸಿಂಹ ರೆಡ್ಡಿ ಕೊಲೆಯಾಗಿದ್ದಾನೆ.