ಕನ್ಯಾಕುಮಾರಿ: ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಮೊದಲು ಪ್ರಧಾನಿ ಮೋದಿ ಎರಡು ದಿನಗಳ ಕಾಲ ಕನ್ಯಾಕುಮಾರಿಯ ವಿವೇಕಾನಂದ ಬಂಡೆಯಲ್ಲಿ ಎರಡು ದಿನಗಳ ಕಾಲ ಧ್ಯಾನ ಮಾಡಲಿದ್ದಾರೆ. ಧ್ಯಾನಕ್ಕಾಗಿ ಅವರು ಮಾಡಿರುವ ಕಟ್ಟುನಿಟ್ಟುಗಳೇನು ನೋಡಿ.
ಪ್ರಧಾನಿ ಮೋದಿ ಪ್ರತೀ ಬಾರಿ ಲೋಕಸಭೆ ಚುನಾವಣೆ ಮುಗಿದ ಬಳಿಕ ಧ್ಯಾನ ಮಾಡುವ ಪದ್ಧತಿ ಪಾಲಿಸಿಕೊಂಡು ಬಂದಿದ್ದಾರೆ. ಈ ಮೊದಲು ಎರಡು ಬಾರಿಯೂ ಅವರು ಬೇರೆ ಬೇರೆ ಸ್ಥಳಗಳಲ್ಲಿ ಧ್ಯಾನ ಮಾಡಿದ್ದರು. ಈ ಬಾರಿ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ್ದ ಸ್ಥಳದಲ್ಲೇ ಧ್ಯಾನ ಮಾಡಲು ತೀರ್ಮಾನಿಸಿದ್ದಾರೆ.
ಅದರಂತೆ ಒಟ್ಟು 45 ಗಂಟೆಗಳ ನಿರಂತರ ಧ್ಯಾನ ಮಾಡಲಿದ್ದಾರೆ. ಈ ವೇಳೆ ಅವರು ಆಹಾರ ವಿಚಾರದಲ್ಲೂ ಕಟ್ಟುನಿಟ್ಟು ಮಾಡಲಿದ್ದಾರೆ. ಎರಡು ದಿನಗಳ ಕಾಲ ಕೇವಲ ದ್ರವಾಹಾರ ಮಾತ್ರ ಸೇವನೆ ಮಾಡಲಿದ್ದಾರೆ. ಧ್ಯಾನದ ಹೊರತಾಗಿ ಬಾಹ್ಯ ಪ್ರಪಂಚದೊಂದಿಗೆ ಯಾವುದೇ ಸಂಪರ್ಕವಿಟ್ಟುಕೊಳ್ಳುವುದಿಲ್ಲ. ಜೊತೆಗೆ ಮಾತೂ ಇಲ್ಲದೇ ದೇವರ ಧ್ಯಾನದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಕಳೆದ ಬಾರಿ 2019 ರ ಚುನಾವಣೆ ಬಳಿಕ ಕೇದಾರನಾಥ ಗುಹೆಯಲ್ಲಿ ಮೋದಿ 15 ಗಂಟೆಗಳ ಕಾಲ ನಿರಂತರ ಧ್ಯಾನ ಮಾಡಿದ್ದರು. ಆದರೆ ಈ ಬಾರಿ ಅತೀ ಹೆಚ್ಚು ಅವಧಿ ಧ್ಯಾನ ಮಾಡಲಿದ್ದಾರೆ. ಇದಕ್ಕೆ ಮೊದಲು ಅವರು ವಿವೇಕಾನಂದರ ಪ್ರತಿಮೆಗೆ ನಮಸ್ಕರಿಸಿದ್ದಾರೆ.