ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ನಮ್ಮ ಯೋಧರ ಮೇಲೆ ವಿಶ್ವಾಸವಿಲ್ಲ. ಅದಕ್ಕೇ ಡೋಕ್ಲಾಂ ಬಿಕ್ಕಟ್ಟು ಎದುರಾದಾಗ ಚೀನಾ ರಾಯಭಾರಿಗಳೊಂದಿಗೆ ಮಾತುಕತೆ ನಡೆಸಿದರು ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಭ್ರಷ್ಟಾಚಾರ, ಕುಟುಂಬ ರಾಜಕಾರಣ ಹಾಗೂ ಜಾತಿವಾದ ರಾಜಕಾರಣದಲ್ಲಿ ಮುಳುಗಿರುವ ಕಾಂಗ್ರೆಸ್ ನಿಂದ ಹಿಮಾಚಲ ಪ್ರದೇಶವನ್ನು ರಕ್ಷಿಸಬೇಕಿದೆ ಎಂದು ಅವರು ಈ ಸಂದರ್ಭದಲ್ಲಿ ಕರೆ ಕೊಟ್ಟಿದ್ದಾರೆ.
‘ಡೋಕ್ಲಾಂ ವಿವಾದದ ಸಂದರ್ಭದಲ್ಲಿ ಕಾಂಗ್ರೆಸ್ ಹೇಗೆ ನಡೆದುಕೊಂಡಿತು ಎಂದು ಇಡೀ ರಾಷ್ಟ್ರವೇ ನೋಡಿದೆ. ನಮ್ಮ ದೇಶವನ್ನು ದಶಕಗಳ ಕಾಲ ಆಳಿದ ವಂಶದ ಕುಡಿಗೆ ನಮ್ಮ ಸೈನಿಕರ ಮೇಲೆಯೇ ನಂಬಿಕೆಯಿಲ್ಲ. ಅದರ ಬದಲು ಚೀನಾ ರಾಯಭಾರಿಯನ್ನು ಭೇಟಿಯಾಗಿ ಡೋಕ್ಲಾಂ ವಿವಾದದ ಸ್ಥಿತಿಗತಿ ತಿಳಿದುಕೊಂಡರು’ ಎಂದು ರಾಹುಲ್ ಹೆಸರು ಹೇಳದೆಯೇ ವ್ಯಂಗ್ಯವಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ