ಪ್ರಧಾನಿ ನರೇಂದ್ರ ಮೋದಿ ಸರಕಾರದಲ್ಲಿ ಜನಸಾಮಾನ್ಯರಿಗೆ ಅಚ್ಚೇದಿನ್ ಬಂದಿಲ್ಲ. ಆದರೆ, ಅಂಬಾನಿ, ಆದಾನಿ, ಅಮಿತ್ ಶಾಗೆ ಅಚ್ಚೇದಿನ್ ಬಂದಿದೆ ಎಂದು ಸಿಎಂಮ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಸರಿಯಾಗಿ ಜಿಎಸ್‌ಟಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ರೈತರ ಸಾಲದ ಬಗ್ಗೆ ಬಾಯ್ಬಿಡದ ಪ್ರಧಾನಿ ಮೋದಿ ಪ್ರಕಾಶ್ ಜಾವ್ಜೇಕರ್ ಅವರಿಂದ ಹೇಳಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯಕ್ಕೆ ಯಾರೇ ಬಂದರೂ ಏನು ಮಾಡಲಾಗಲ್ಲ. ಇದು ಉತ್ತರಪ್ರದೇಶವಲ್ಲ. ಪ್ರಬುದ್ಧ ಮತದಾರರಿರುವ ರಾಜ್ಯ. ಇಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆಟ ನಡೆಯೋಲ್ಲ ಎಂದು ಗುಡುಗಿದರು.
ಅಮಿತ್ ಶಾ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿವೆ
ರೆಡ್ಡಿ ಸಹೋದರರನ್ನು ಫ್ರೀಯಾಗಿ ಲೂಟಿ ಹೊಡೆಯಲು ಬಿಟ್ಟಿದ್ದಾರೆ. ಕಬ್ಬಿಣ ಅದಿರು ಲೂಟಿಯಲ್ಲಿ ಬಿಎಸ್‌ವೈ ಕುಮ್ಮಕ್ಕಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.