ನವದೆಹಲಿ : ದೇಶದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬ್ಯಾನ್ ಆಗೋ ದಿನಗಳು ಹತ್ತಿರವಾದಂತೆ ಕಾಣುತ್ತಿದೆ.
ನಿಷೇಧದ ಮೊದಲ ಭಾಗವಾಗಿಯೇ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ ಜಾರಿ ನಿರ್ದೇಶನಾಲಯ ಬಿಗ್ ಶಾಕ್ ನೀಡಿದೆ.
ಪಿಎಂಎಲ್ಎ ಕಾಯ್ದೆಯಡಿ ಪಿಎಫ್ಐನ 23 ಬ್ಯಾಂಕ್ ಖಾತೆಗಳನ್ನು ಇ.ಡಿ ಮುಟ್ಟುಗೋಲು ಹಾಕಿಕೊಂಡಿದೆ. ಅಲ್ಲದೇ, ಪಿಎಫ್ಐನ ಮತ್ತೊಂದು ಅಂಗಸಂಸ್ಥೆ ರಿಹಾಬ್ ಇಂಡಿಯಾ ಫೌಂಡೇಷನ್ಗೆ ಸೇರಿದ 10 ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದೆ.
ಈ ಖಾತೆಗಳಲ್ಲಿ ಇದ್ದ 9.5 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಿದೆ. ಪಿಎಎಸ್ಐ ಸಂಘಟನೆ ಮತ್ತು ರಿಹ್ಯಾಬ್ ಇಂಡಿಯಾ ಫೌಂಡೇಶನ್ ಖಾತೆಯಲ್ಲಿ ಒಟ್ಟು 68,62,081 ರೂಪಾಯಿ ಇದೆ. ಈ ಖಾತೆಯನ್ನು ಫ್ರೀಜ್ ಮಾಡಲಾಗಿದೆ ಎಂದು ಇಡಿ ಮಾಹಿತಿ ಹಂಚಿಕೊಂಡಿದೆ.