Publish Date: Wed, 16 Sep 2020 (08:11 IST)
Updated Date: Wed, 16 Sep 2020 (08:13 IST)
ಗುಜರಾತ್ : 80 ವರ್ಷದ ವೃದ್ಧೆಯ ಮೇಲೆ 40 ವರ್ಷದ ವ್ಯಕ್ತಿಯೊಬ್ಬ ಮಾನಭಂಗ ಎಸಗಲು ಯತ್ನಿಸಿ ಆಕೆಯನ್ನು ಕೊಲೆ ಮಾಡಿದ ಘಟನೆ ಗುಜರಾತ್ ನ ರಾಜ್ ಕೋಟ್ ಎಂಬಲ್ಲಿ ನಡೆದಿದೆ.
ರಾತ್ರಿ ಬಸ್ಸು ನಿಲ್ದಾಣದಲ್ಲಿ ಅಜ್ಜಿ ಬಸ್ಸಿಗಾಗಿ ಕಾಯುತ್ತಾ ಕುಳಿತಿದ್ದಾಗ ಅಲ್ಲಿಗೆ ಬಂದ ಕಾಮುಕನೊಬ್ಬ ಅಜ್ಜಿ ಒಬ್ಬಳೆ ಇರುವುದನ್ನು ಕಂಡು ಆಕೆಯನ್ನು ಎಳೆದೊಯ್ಯಲು ಯತ್ನಿಸಿದ್ದಾನೆ. ಆಗ ಅಜ್ಜಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಇದರಿಂದ ಗಾಬರಿಗೊಂಡ ಆತ ಬಟ್ಟೆಯಿಂದ ಅಜ್ಜಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ.
ಅಜ್ಜಿಯ ಕೂಗಟ ಕೇಳಿ ಅಲ್ಲಿಗೆ ಬಂದ ಸ್ಥಳೀಯರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಅಜ್ಜಿಯ ಮಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.