Publish Date: Sun, 06 Sep 2020 (10:16 IST)
Updated Date: Sun, 06 Sep 2020 (10:28 IST)
ಪಾಟ್ನಾ : 4 ವರ್ಷದ ಬಾಲಕನ ಮೇಲೆ ಇಬ್ಬರು ಯುವಕರು ಸೇರಿ ದೌರ್ಜನ್ಯ ಎಸಗಿ ಬೆದರಿಕೆ ಹಾಕಿದ ಘಟನೆ ಬಿಹಾರದ ಪಾಟ್ನಾ ಜಿಲ್ಲೆಯ ಹಳ್ಳಿಯಲ್ಲಿ ನಡೆದಿದೆ.
ಸಂಜಯ್ ಮಂಜಿ(22), ಸಮು ಮಂಜಿ(18) ಇಂತಹ ಕೃತ್ಯ ಎಸಗಿದ ಯುವಕರು. ಇವರಿಬ್ಬರು ಸೇರಿ ಬಾಲಕನನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ದೌರ್ಜನ್ಯ ಎಸಗುತ್ತಿದ್ದರು. ಮತ್ತು ಈ ಬಗ್ಗೆ ಯಾರಿಗೂ ಹೇಳಬಾರದೆಂದು ಆತನನ್ನು ಥಳಿಸಿ ಬೆದರಿಕೆ ಹಾಕಿದ್ದಾರೆ.
ಬೆನ್ನು ನೋವಿನಿಂದ ಬಳಲುತ್ತಿದ್ದ ಬಾಲಕನ್ನು ಪೋಷಕರು ವಿಚಾರಿಸಿದಾಗ ಆತ ಈ ಕೃತ್ಯವನ್ನು ಬಾಯ್ಬಿಟ್ಟಿದ್ದಾನೆ. ಈ ಬಗ್ಗೆ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿ ಜೈಲಿಗಟ್ಟಿದ್ದಾರೆ ಎನ್ನಲಾಗಿದೆ.