ಜಮ್ಮು ಕಾಶ್ಮೀರ: ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯ ಮತ್ತೊಂದು ಭೀಕರ ವಿಡಿಯೋ ಈಗ ವೈರಲ್ ಆಗಿದೆ. ವ್ಯಕ್ತಿಯೊಬ್ಬರು ಉಗ್ರರ ದಾಳಿಯ ಅರಿವೇ ಇಲ್ಲದೇ ಸೆಲ್ಫೀ ವಿಡಿಯೋವೊಂದನ್ನು ಮಾಡಿದ್ದು ಇದರಲ್ಲಿ ದಾಳಿಯ ಲೈವ್ ಕ್ಷಣಗಳು ಸೆರೆಯಾಗಿವೆ.
ಗುಜರಾತ್ ನ ಅಹಮ್ಮದಾಬಾದ್ ನಿವಾಸಿಯೊಬ್ಬರು ಆ ಕ್ಷಣ ಅಲ್ಲಿದ್ದರು. ರೋಪ್ ಕ್ರಾಸಿಂಗ್ ಮಾಡುವಾಗ ಅವರು ಸೆಲ್ಫೀ ಮಾಡುತ್ತಿದ್ದರು. ಈ ವೇಳೆ ಉಗ್ರರು ದಾಳಿ ನಡೆಸುತ್ತಿದ್ದರು. ತಮ್ಮದೇ ಲೋಕದಲ್ಲಿದ್ದ ಅವರಿಗೆ ಉಗ್ರರು ದಾಳಿ ಮಾಡುತ್ತಿರುವುದು ಅರಿವಿಗೇ ಬಂದಿರಲಿಲ್ಲ.
ರೋಪ್ ಕ್ರಾಸಿಂಗ್ ಮಾಡುವಾಗ ಸುರಕ್ಷತೆಗಾಗಿ ಹೆಲ್ಮೆಟ್ ಹಾಕಿಕೊಂಡಿರುತ್ತಾರೆ. ಹೀಗಾಗಿ ಆ ಪ್ರವಾಸಿಗನಿಗೆ ಕೆಳಗೆ ಕಿರುಚಾಟದ ಸದ್ದು ಕೇಳಿಸಿರಲಿಲ್ಲ. ಆದರೆ ಅವರ ವಿಡಿಯೋ ಹಿನ್ನಲೆಯಲ್ಲಿ ಉಗ್ರರು ಓರ್ವ ವ್ಯಕ್ತಿಗೆ ಗುಂಡು ಹಾರಿಸಿ ಆತ ಕೆಳಕ್ಕೆ ಕುಸಿಯುವ ಕ್ಷಣಗಳು ಸೆರೆಯಾಗಿವೆ.
ಕೊನೆಯಲ್ಲಿ ಆತನಿಗೆ ಏನೋ ಅನಾಹುತವಾಗುತ್ತಿರುವುದು ಗೊತ್ತಾಗಿದ್ದು, ಕ್ಯಾಮರಾ ಆಫ್ ಮಾಡಿ ಗಡಿಬಿಡಿಯಲ್ಲಿ ಇಳಿದು ಹೋಗುವುದು ದಾಖಲಾಗಿದೆ.