Select Your Language

Notifications

webdunia
webdunia
webdunia
webdunia

ನೀವು ಸರ್ವಾಧಿಕಾರಿಯಲ್ಲ: ಸಿಎಂ ಸಿದ್ದರಾಮಯ್ಯಗೆ ನಡೆಗೆ ಸಿಟಿ ರವಿ ಆಕ್ರೋಶ

ಸಿ.ಟಿ.ರವಿ

Sampriya

ಬೆಂಗಳೂರು , ಸೋಮವಾರ, 28 ಏಪ್ರಿಲ್ 2025 (19:37 IST)
Photo Credit X
ಬೆಂಗಳೂರು: ನೀವು  ಸರ್ವಾಧಿಕಾರಿಯಲ್ಲ, ನಿಮ್ಮ ನಡವಳಿಕೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ತಕ್ಕ ನಡವಳಿಕೆ ಅಲ್ಲ. ಕರ್ನಾಟಕ ರಾಜ್ಯದ ಗೌರವವನ್ನು ಸಿಎಂ ಸಿದ್ದರಾಮಯ್ಯ ಹರಾಜು ಹಾಕಿದ್ದಾರೆ ಎಂದು ಸಿಟಿ ರವಿ ಆಕ್ರೋಶ ಹೊರಹಾಕಿದ್ದಾರೆ.

ಇಂದು ವೇದಿಕೆ ಮೇಲೆ ಪೊಲೀಸ್‌ ಅಧಿಕಾರಿಯೊಬ್ಬರಿಗೆ ಸಿಎಂ ಸಿದ್ದರಾಮಯ್ಯ ಅವರು ಕೈ ಎತ್ತಿ ಹೊಡೆಯಲು ಮುಂದಾಗುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯಿತು.  ಸಿದ್ದರಾಮಯ್ಯಗೆ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಸಿಟಿ ರವಿ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದು ಆಕ್ರೋಶ ಹೊರಹಾಕಿದ್ದಾರೆ.

ಬಹಳ ಹಿಂದೆ, ಯಾವಾಗಲೋ ಬಿಹಾರದಲ್ಲೊ ಉತ್ತರಪ್ರದೇಶದಲ್ಲೊ ಕೇಳುತ್ತಿದ್ದ ಸುದ್ದಿಯನ್ನು ಇಂದು ಕರ್ನಾಟಕದಲ್ಲಿ ಕೇಳುತ್ತಿದ್ದೇವೆ. ಕರ್ನಾಟಕದ ಸಭ್ಯ ಸಂಸ್ಕೃತಿಗೆ ಅಪಮಾನ ಮಾಡಿದ್ದೀರಿ. ನಿಮ್ಮ ವರ್ತನೆ ಗೂಂಡಾಗಳ ವರ್ತನೆಯಂತೆ ಇತ್ತು.

ನಿಮ್ಮ ಸಂವಿಧಾನ ವಿರೋಧಿ ನಡವಳಿಕೆಗೆ ಧಿಕ್ಕಾರವಿರಲಿ. ನಿಮ್ಮ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಗೆ ಧಿಕ್ಕಾರವಿರಲಿ,ಧಿಕ್ಕಾರವಿರಲಿ…
ಈ ಅಧಿಕಾರ ಮದದ ಅಹಂಕಾರ ಒಂದು ದಿನ ಕೊನೆಯಾಗಲೇಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ವರದಕ್ಷಿಣೆಗಾಗಿ ಊಟ ನೀಡದೆ 21ಕೆಜಿ ಕುಸಿದು ಮಹಿಳೆ ಸಾವು ಪ್ರಕರಣ: ಪತಿ, ಅತ್ತೆಗೆ ಜೀವಾವಧಿ ಶಿಕ್ಷೆ