ಗುಜರಾತ್ : ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ 22 ವರ್ಷದ ಬುಡಕಟ್ಟು ಮಹಿಳೆಯೊಬ್ಬಳ ಮೇಲೆ ಜಮೀನಿನ ಮಾಲೀಕ ಪದೇ ಪದೇ ಮಾನಭಂಗ ಎಸಗಿದ ಘಟನೆ ಗುಜರಾತ್ ನ ಕಚ್ ಜಿಲ್ಲೆಯ ರತ್ನಾಲ್ ನಲ್ಲಿ ನಡೆದಿದೆ.
ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆ ತನ್ನ ಪತಿಯೊಂದಿಗೆ ಗುಜರಾತ್ ನ ದಾಹೋಡ್ ನಿಂದ ಇಲ್ಲಿಗೆ ವಲಸೆ ಬಂದಿದ್ದಳು. ಆದರೆ ಜಮೀನಿನ ಮಾಲೀಕ ಆಕೆಯ ಮೇಲೆ ಇಂತಹ ಘೋರ ಕೃತ್ಯ ಎಸಗಿದ್ದಾನೆ. ರೇಪ್ ಮಾಡಿ ವಿಡಿಯೋ ಮಾಡಿಕೊಂಡಿದ್ದಾನೆ. ಹಾಗೇ ಈ ವಿಚಾರ ಯಾರಿಗಾದರೂ ತಿಳಿಸಿದರೆ ಆಕೆಯ ಪತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.
ಆದರೆ ಮಹಿಳೆ ಈ ಬಗ್ಗೆ ಅಹಮದಾಬಾದ್ ನ ಸಬರಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.