ನವದೆಹಲಿ: ಪೌರತ್ವ ಖಾಯಿದೆ ವಿಚಾರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿಗೆ ಈಗ ಮತ್ತೊಂದು ಶಾಕ್ ಸಿಕ್ಕಿದೆ.
ಈ ಬಾರಿಯ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಶ್ಚಿಮ ಬಂಗಾಲದ ಸ್ತಬ್ಧ ಚಿತ್ರಕ್ಕೆ ಅವಕಾಶವೇ ನೀಡದಿರುವುದು ಸಿಎಂ ಮಮತಾ ಬ್ಯಾನರ್ಜಿಯ ಆಕ್ರೋಶ ಹೆಚ್ಚಿಸಲಿರುವುದು ಖಂಡಿತಾ.
ಒಟ್ಟು 56 ಸ್ತಬ್ಧ ಚಿತ್ರಗಳ ಪ್ರಸ್ತಾಪನೆ ಕೇಂದ್ರ ಆಯ್ಕೆ ಸಮಿತಿಗೆ ಬಂದಿತ್ತು. ಈ ಪೈಕಿ ಕೇವ 22 ಸ್ತಬ್ಧ ಚಿತ್ರಗಳನ್ನು ಅವುಗಳ ತಯಾರಿ, ವಿನ್ಯಾಸ, ಪರಿಕಲ್ಪನೆಯನ್ನು ಗಮನದಲ್ಲಿಟ್ಟುಕೊಂಡು ಪಥ ಸಂಚಲನದಲ್ಲಿ ಪ್ರದರ್ಶಿಸಲು ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ಹೇಳಿದೆ. ಆದರೆ ಇದರಲ್ಲಿ ಪ.ಬಂಗಾಲದ ಸ್ತಬ್ಧ ಚಿತ್ರ ಆಯ್ಕೆಯಾಗಿಲ್ಲ. ಇದು ದೀದಿಯ ಆಕ್ರೋಶ ಮತ್ತಷ್ಟು ಹೆಚ್ಚಿಸುವ ಸಾಧ‍್ಯತೆಯಿದೆ.