Publish Date: Thu, 02 Jan 2020 (10:45 IST)
Updated Date: Thu, 02 Jan 2020 (10:49 IST)
ನವದೆಹಲಿ: ಸಬ್ಸಿಡಿ ರಹಿತ ಅಡುಗೆ ಅನಿಲದ ಬೆಲೆ ತುಸು ಏರಿಕೆಯಾಗಿದೆ. ಪ್ರತಿ ಸಿಲಿಂಡರ್ ಗೆ ರೂಪಾಯಿ 19ರಂತೆ ಹೆಚ್ಚಿಸಲಾಗಿದೆ.
14.2 ಕೆಜಿಯ ಅಡುಗೆ ಅನಿಲ ಸಿಲಿಂಡರ್ ನ ಬೆಲೆ ಸತತ ಐದನೇ ಬಾರಿಗೆ ಹೆಚ್ಚಳವಾಗುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿದೆ.
ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 714ರೂ ಮತ್ತು ಮುಂಬೈನಲ್ಲಿ 684.50ರೂ ಆಗಲಿದೆಯಂತೆ. ಗ್ರಾಹಕರು ತಮ್ಮ ಪಾಲಿನ ವಾರ್ಷಿಕ ಸಬ್ಸಿಡಿಸಹಿತ 12 ಸಿಲಿಂಡರ್ ಗಳ ಮಿತಿ ಕೊನೆಯಾದ ಬಳಿಕ ಸಬ್ಸಿಡಿರಹಿತ ಬೆಲೆಗೆ ಖರೀದಿಸಬೇಕಾಗುತ್ತದೆ.