Publish Date: Fri, 24 Jan 2020 (09:15 IST)
Updated Date: Fri, 24 Jan 2020 (09:18 IST)
ನವದೆಹಲಿ: ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಅಪರಾಧಿಗಳ ಗಲ್ಲು ಶಿಕ್ಷೆ ದಿನ ಹತ್ತಿರ ಬರುತ್ತಿದ್ದಂತೇ ಅಧಿಕಾರಿಗಳು ಕೊನೆಯ ಹಂತದ ಔಪಚಾರಿಕತೆಗಳನ್ನು ಪೂರ್ತಿ ಮಾಡುತ್ತಿದ್ದಾರೆ.
ಫೆಬ್ರವರಿ 1 ಕ್ಕೆ ಈ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ದಿನಾಂಕ ನಿಗದಿಯಾಗಿದೆ. ಇದಕ್ಕೂ ಮೊದಲು ಅಪರಾಧಿಗಳಿಗೆ ಕೊನೆಯ ಆಸೆ ಏನಾದರೂ ಇದೆಯಾ ಎಂದು ನಿಯಮದ ಪ್ರಕಾರ ಕೇಳಲಾಗಿದೆ. ಆದರೆ ಇದಕ್ಕೆ ನಾಲ್ವರೂ ಮೌನ ತಾಳಿದ್ದಾರೆ ಎನ್ನಲಾಗಿದೆ. ಆಸ್ತಿ ಯಾರಿಗಾದರೂ ವಿಲ್ ಮಾಡಬೇಕಾಗಿದೆಯೇ ಎಂಬುದಕ್ಕೂ ಇವರು ಯಾರೂ ಉತ್ತರಿಸಿಲ್ಲ.
ಗಲ್ಲು ಶಿಕ್ಷೆ ದಿನ ಹತ್ತಿರ ಬರುತ್ತಿದ್ದಂತೇ ತೀರಾ ಖಿನ್ನರಾಗಿರುವ ಈ ಅಪರಾಧಿಗಳು ಊಟ-ತಿಂಡಿಯನ್ನೂ ಸರಿಯಾಗಿ ಸೇವಿಸುತ್ತಿಲ್ಲ ಎನ್ನಲಾಗಿದೆ. ಇವರಿಗೆ ವಿಶೇಷ ಭದ್ರತೆ ನೀಡಲಾಗಿದ್ದು, ವಾರಕ್ಕೆ ಎರಡು ಬಾರಿ ಕುಟುಂಬದವರ ಭೇಟಿಗೂ ಅವಕಾಶ ನೀಡಲಾಗಿದೆ.