ನವದೆಹಲಿ: ಫೆಬ್ರವರಿ 1 ರಂದು ಗಲ್ಲು ಶಿಕ್ಷೆಗೆ ಗುರಿಯಾಗಬೇಕಾಗಿರುವ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ನಾಲ್ವರು ಅಪರಾಧಿಗಳ ಪೈಕಿ ಪವನ್ ಕುಮಾರ್ ಗುಪ್ತಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ.
ಪ್ರಕರಣ ನಡೆದಾಗ ತನಗೆ 18 ವರ್ಷವಾಗಿರಲಿಲ್ಲ. ಹೀಗಾಗಿ ತನ್ನನ್ನು ಬಾಲಪರಾಧಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಬೇಕು ಎಂದು ಪವನ್ ತಗಾದೆ ತೆಗೆದಿದ್ದಾನೆ. ಈ ಅರ್ಜಿಯ ವಿಚಾರಣೆಯನ್ನು ಇಂದು ಸುಪ್ರೀಂ ಕೋರ್ಟ್ ನಡೆಸಿ ಈತನ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ವಿಧಿಸಬೇಕೋ ಬೇಡವೋ ಎಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ.
ಹಿಂದೊಮ್ಮೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪವನ್ ದೆಹಲಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ. ಆಗ ಕೋರ್ಟ್ ಆತನ ಲಾಯರ್ ವಯಸ್ಸಿನ ಕುರಿತು ನಕಲಿ ದಾಖಲೆ ಸಲ್ಲಿಸಿದ್ದಕ್ಕೆ ಛೀಮಾರಿ ಹಾಕಿತ್ತು. ಇದೀಗ ಮತ್ತೆ ಗಲ್ಲು ಶಿಕ್ಷೆ ಮುಂದೂಡಲು ನಾಲ್ವರೂ ಆರೋಪಿಗಳು ಒಬ್ಬೊಬ್ಬರಾಗಿ ಅರ್ಜಿ ಸಲ್ಲಿಸುತ್ತಾ ಒಂದೊಂದು ನೆಪ ಹೇಳುತ್ತಿದ್ದಾರೆ.