ಮುಂಬೈ : ಅಕ್ಟೋಬರ್-ಡಿಸೆಂಬರ್ ಮೂರನೇ ತ್ರೈಮಾಸಿಕದಲ್ಲಿ ಅದಾನಿ ಎಂಟರ್ಪ್ರೈಸಸ್ 820 ಕೋಟಿ ರೂ. ನಿವ್ವಳ ಲಾಭಗಳಿಸಿದೆ.
2021ರ ಈ ಅವಧಿಯಲ್ಲಿ11.63 ಕೋಟಿ ರೂ. ನಷ್ಟ ಅನುಭವಿಸಿತ್ತು. ಹಿಂದಿನ ಈ ಅವಧಿಯಲ್ಲಿ 18,757.9 ಕೋಟಿ ರೂ. ಆದಾಯವಿದ್ದರೆ ಈ ಬಾರಿ ಇದು ಶೇ.42ರಷ್ಟು ಏರಿಕೆಯಾಗಿದ್ದು 26,612.2 ಕೋಟಿ ರೂ.ಗೆ ಜಿಗಿದಿದೆ.
2022-23ರ ಹಣಕಾಸು ವರ್ಷದಲ್ಲಿ ಅದಾನಿ ಎಂಟರ್ಪ್ರೈಸಸ್ 29,245 ಕೋಟಿ ರೂ. ಆದಾಯ ಮತ್ತು 582.80 ಕೋಟಿ ನಿವ್ವಳ ಲಾಭವನ್ನು ಗಳಿಸಬಹುದು ಬ್ಲೂಮ್ಬರ್ಗ್ ಅಂದಾಜಿಸಿದೆ.
ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ ಬಳಿಕ ಅದಾನಿ ಎಂಟರ್ಪ್ರೈಸಸ್ ಷೇರಿನ ಮೌಲ್ಯ ಶೇ.50ರಷ್ಟು ಕುಸಿತಕಂಡಿತ್ತು. ಆದರೆ ಮೂರನೇ ತ್ರೈಮಾಸಿಕದ ವರದಿ ಪ್ರಕಟಗೊಂಡ ಬೆನ್ನಲ್ಲೇ ಅದಾನಿ ಎಂಟರ್ಪ್ರೈಸಸ್ ಷೇರಿನ ಬೆಲೆ ಶೇ.1.91 ರಷ್ಟು ಏರಿಕೆ ಮಂಗಳವಾರ 1,750.30 ರೂ.ಗೆ(+32.75 ರೂ.) ವಹಿವಾಟು ಮುಗಿಸಿತು.
ನಮ್ಮ ಯಶಸ್ಸಿಗೆ ನಮ್ಮ ಬಲವಾದ ಆಡಳಿತ, ಕಟ್ಟುನಿಟ್ಟಾದ ನಿಯಂತ್ರಕ ಅನುಸರಣೆ, ನಿರಂತರ ಕಾರ್ಯಕ್ಷಮತೆ ಮತ್ತು ಘನ ನಗದು ಹರಿವು ಕಾರಣ ಎಂದು ಕಂಪನಿಯ ಮುಖ್ಯಸ್ಥ ಗೌತಮ್ ಅದಾನಿ ಹೇಳಿದ್ದಾರೆ.