ನವದೆಹಲಿ : ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ 72 ಗಂಟೆಯ ಒಳಗಡೆ ಅದಾನಿ ಸಮೂಹದ ಬಗ್ಗೆ ಹಿಂಡೆನ್ಬರ್ಗ್ ಪ್ರಕಟಿಸಿದ ಆರೋಪಕ್ಕೆ ವರದಿ ನೀಡಬೇಕೆಂದು ಅದಾನಿ ಕಂಪನಿಯ ಮಾಜಿ ವಕೀಲ, ಭಾರತ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಹೇಳಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ಗೌತಮ್ ಆದಾನಿ ಅವರನ್ನು ಕರೆದು ಪ್ರತಿಕ್ರಿಯೆ ಪಡೆಯಬೇಕು. ಬಳಿಕ ಕೆಲ ಕ್ಷೇತ್ರಗಳಲ್ಲಿ ಕಾಳಜಿ ಇದೆ ಅಥವಾ ಈ ವರದಿ ಅಸಂಬದ್ಧ ಎಂದು ಸ್ಪಷ್ಟಪಡಿಸಬೇಕು ಎಂದು ಹೇಳಿದರು.
ಭಾರತದ ಉದ್ಯಮಿಗಳು ಈಗ ಜಗತ್ತಿನಲ್ಲಿ ಅಸ್ತಿತ್ವ ಹೊಂದಿದ್ದಾರೆ. ಇದನ್ನು ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಭಾರತದಲ್ಲಿ ಹೂಡಿಕೆ ಮಾಡಲು ನಾವು ಬ್ರಿಟಿಷ್ ಉದ್ಯಮಿಗಳನ್ನು ಓಲೈಸುವ ಸಮಯವಿತ್ತು. ಈಗ ಬ್ರಿಟಿಷ್ ಸರ್ಕಾರವು ಯುಕೆಯಲ್ಲಿ ಹೂಡಿಕೆ ಮಾಡಲು ಭಾರತೀಯರನ್ನು ಓಲೈಸುವುದನ್ನು ನಾವು ನೋಡಬಹುದು ಎಂದು ತಿಳಿಸಿದರು.