Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಮ್ಮ ವಿರುದ್ಧ ನಿಲ್ಲುವ ರಾಜಕೀಯ ನಾಯಕರ ಮೇಲೆ ಮೋದಿಯಿಂದ ಸಿಬಿಐ ಅಸ್ತ್ರ ಪ್ರಯೋಗ-ಚಂದ್ರಬಾಬು ನಾಯ್ಡು ಆರೋಪ

ತಮ್ಮ ವಿರುದ್ಧ ನಿಲ್ಲುವ ರಾಜಕೀಯ ನಾಯಕರ ಮೇಲೆ ಮೋದಿಯಿಂದ ಸಿಬಿಐ ಅಸ್ತ್ರ ಪ್ರಯೋಗ-ಚಂದ್ರಬಾಬು ನಾಯ್ಡು ಆರೋಪ
ಹೈದರಾಬಾದ್ , ಶುಕ್ರವಾರ, 1 ಫೆಬ್ರವರಿ 2019 (05:47 IST)
ಹೈದರಾಬಾದ್ : ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಬೆಂಬಲಿಸುವ ಪಕ್ಷದ ನಾಯಕರನ್ನು ಸಿಬಿಐಯಿಂದ ರಕ್ಷಿಸುತ್ತಾರೆ ಎಂದು ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.


ಆಂಧ್ರ ಪ್ರದೇಶದ ಅಮರಾವತಿಯಲ್ಲಿ ಮಾತನಾಡಿ ಅವರು, ಕೆ.ಚಂದ್ರಶೇಖರ್ ರಾವ್ ನಿವಾಸದ ಮೇಲೆ ದಾಳಿ ಮಾಡಲು ಸಿಬಿಐ ತಂಡವು ಹೈದ್ರಾಬಾದ್‍ ಗೆ ಬಂದಿತ್ತು. ಆಗ ಕೆ.ಚಂದ್ರಶೇಖರ್ ರಾವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡುತ್ತಿದ್ದಂತೆ ಸಿಬಿಐ ತಂಡವು ವಾಪಾಸ್ ಆಗಿದೆ. ಜೊತೆಗೆ ಕೆ.ಚಂದ್ರಶೇಖರ್ ರಾವ್ ಅವರ ಮೇಲಿರುವ ಇಎಸ್‍ ಐ ಆಸ್ಪತ್ರೆಯ ಹಗರಣವನ್ನು ಮುಚ್ಚಿ ಹಾಕಲಾಗುತ್ತಿದೆ ಎಂದು ದೂರಿದ್ದಾರೆ.


ರಾಜಕೀಯ ಪಕ್ಷಗಳನ್ನು ತಮ್ಮ ಮುಂದೆ ಶರಣಾಗುವಂತೆ ಪ್ರಧಾನಿ ಮೋದಿ ಅವರು ಪ್ಲಾನ್ ಮಾಡುತ್ತಿದ್ದಾರೆ. ತಮ್ಮ ವಿರುದ್ಧ ನಿಲ್ಲುವ ರಾಜಕೀಯ ನಾಯಕರ ವಿರುದ್ಧ ಸಿಬಿಐ ಅಸ್ತ್ರವನ್ನು ಪ್ರಯೋಗಿಸುತ್ತಾರೆ. ಹೀಗಾಗಿ ತಮ್ಮ ಮುಂದೆ ಶರಣಾಗುವ ನಾಯಕರನ್ನು ರಕ್ಷಿಸುತ್ತಾರೆ ಎಂದು ಚಂದ್ರಬಾಬು ನಾಯ್ಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಬಡತನ ನಿರ್ಮೂಲನೆ ಮಾಡುವ ಬದಲು ಬಡವರನ್ನೇ ನಿರ್ಮೂಲನೆ ಮಾಡುತ್ತಿದ್ದಾರೆ- ಪ್ರೊ.ಮಹೇಶ್ ಚಂದ್ರ ಗುರು