Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಹಾಘಟಬಂಧನ್ ಭ್ರಷ್ಟಾಚಾರ, ವಂಚನೆ, ಋಣಾತ್ಮಕತೆ ಹಾಗೂ ಅಸ್ಥಿರತೆಯಿಂದ ಆಗಿರುವ ಕೂಟ- ಪ್ರಧಾನಿ ಮೋದಿ

ಮಹಾಘಟಬಂಧನ್ ಭ್ರಷ್ಟಾಚಾರ, ವಂಚನೆ, ಋಣಾತ್ಮಕತೆ ಹಾಗೂ ಅಸ್ಥಿರತೆಯಿಂದ ಆಗಿರುವ ಕೂಟ- ಪ್ರಧಾನಿ ಮೋದಿ
ನವದೆಹಲಿ , ಸೋಮವಾರ, 21 ಜನವರಿ 2019 (07:39 IST)
ನವದೆಹಲಿ : ಹಲವು ಪಕ್ಷಗಳು ಸೇರಿ ರೂಪಿಸಿದ ಮಹಾಘಟಬಂಧನ್ ಭ್ರಷ್ಟಾಚಾರ, ವಂಚನೆ, ಋಣಾತ್ಮಕತೆ ಹಾಗೂ ಅಸ್ಥಿರತೆಯಿಂದ ಆಗಿರುವ ಕೂಟ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.


ಗುಜರಾತ್‍ನ ಸಿಲ್ವಾಸ್‍ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು,’ ಬಡವರ ಪಡಿತರ, ಪಿಂಚಣಿಯನ್ನು ತಿಂದ ಪಕ್ಷ (ಕಾಂಗ್ರೆಸ್) ಜೊತೆಗೆ ಸೇರಿ ಕೆಲವು ಪಕ್ಷಗಳು ಮಹಾಘಟಬಂಧನ್ ರೂಪಿಸುತ್ತಿವೆ. ಆದರೆ ಬಿಜೆಪಿ ದೇಶದ 125 ಕೋಟಿ ಜನರೊಂದಿಗೆ ಮೈತ್ರಿ ಮಾಡಿಕೊಂಡಿದೆ’ ಎಂದು ತಿಳಿಸಿದ್ದಾರೆ.


‘ಕಾಂಗ್ರೆಸ್ ಯಾವುದೇ ಪಕ್ಷದ ಜೊತೆಗೆ ಸೇರಿ ಮಹಾಘಟಬಂಧನ್ ಮಾಡಿಕೊಂಡರೂ ಅದರ ಕರ್ಮ ಕಳೆಯುವುದಿಲ್ಲ. ಮಹಾಮೈತ್ರಿಯ ನಾಯಕರಿಗೆ `ಧನಬಲ’ವಿದೆ. ಆದರೆ ನಮಗೆ `ಜನಬಲ’ವಿದೆ. ಇದರಲ್ಲಿ ಯಾವುದು ಗೆಲ್ಲುತ್ತದೆ ನೋಡೋಣ’ ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಣೆ ಮಾಡಿದ ಸಿದ್ದರಾಮಯ್ಯ