Select Your Language

Notifications

webdunia
webdunia
webdunia
webdunia

ದೆಹಲಿ ಎಕ್ಸ್‌ಪ್ರೆಸ್‌ವೇಗೆ ಮೋದಿ ಚಾಲನೆ

ದೆಹಲಿ ಎಕ್ಸ್‌ಪ್ರೆಸ್‌ವೇಗೆ ಮೋದಿ ಚಾಲನೆ
ಜೈಪುರ , ಸೋಮವಾರ, 13 ಫೆಬ್ರವರಿ 2023 (07:00 IST)
ಜೈಪುರ : ರಾಜಸ್ಥಾನ  ಚುನಾವಣೆಯ ಸನಿಹದಲ್ಲಿ ದೇಶದ ಅತಿದೊಡ್ಡ ಮುಂಬೈ-ದೆಹಲಿ ಎಕ್ಸ್ಪ್ರೆಸ್ವೇಯ ಮೊದಲ ಹಂತವನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 1,386 ಕಿಲೋಮೀಟರ್ಗಳ ಎಕ್ಸ್ಪ್ರೆಸ್ ಹೈವೇಯನ್ನು ಅತ್ಯಂತ  ವೇಗವಾಗಿ ಪೂರ್ಣಗೊಳಿಸುತ್ತಿದೆ. ಇದರ ಮೊದಲ ಹಂತವಾಗಿ ಸಾಹ್ನಾ – ದೌಸಾ ಮಧ್ಯೆ ನಿರ್ಮಿಸಲಾದ ಹೆದ್ದಾರಿಯನ್ನು ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.

ಇದರಿಂದಾಗಿ ದೆಹಲಿ-ಜೈಪುರ ನಡುವಿನ ಅಂತರ ಎರಡು ಗಂಟೆಗೆ ಇಳಿದಿದೆ. ಸದ್ಯ ದೆಹಲಿಯಿಂದ ಜೈಪುರಕ್ಕೆ ತೆರಳಲು ನಾಲ್ಕರಿಂದ ಐದು ಗಂಟೆ ಹಿಡಿಯುತ್ತಿದೆ. ಈ ಎಂಟು ಲೇನ್ಗಳ ಸಾಹ್ನಾ -ದೌಸಾ 246 ಕಿಲೋಮೀಟರ್ ಹೆದ್ದಾರಿಯನ್ನು 10,400 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ನರೇಂದ್ರ ಮೋದಿ: ನಾಡಿನ ಗಣ್ಯರ ಜೊತೆ ಸಂವಾದ