ವಾಷಿಂಗ್ಟನ್ : ರಷ್ಯಾ-ಉಕ್ರೇನ್ ನಡುವಿನ ಯುದ್ಧ ನಿಲ್ಲಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಾಧ್ಯ ಎಂದು ಅಮೆರಿಕ ಹೇಳಿದೆ.
ಯುದ್ಧ ನಿಲ್ಲಿಸಲು ರಷ್ಯಾಗೆ ಇನ್ನೂ ಸಮಯವಿದೆ. ಆದ್ರೆ ಯುದ್ಧ ನಿಲ್ಲಿಸುವಂತೆ ರಷ್ಯಾ ಮನವೊಲಿಸುವ ಕಾರ್ಯವನ್ನು ಭಾರತದ ಪ್ರಧಾನ ಮೋದಿ ಕೈಗೊಂಡರೆ ನಾವು ಸ್ವಾಗತಿಸುತ್ತೇವೆ.
ಪ್ರಧಾನಿ ಮೋದಿ ಕೈಗೊಳ್ಳಲು ಸಿದ್ಧರಿರುವ ಯಾವುದೇ ಪ್ರಯತ್ನಗಳ ಬಗ್ಗೆ ಮಾತನಾಡಲು ನಾವು ಮುಕ್ತರಾಗಿದ್ದೇವೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರ ಜಾನ್ ಕಿರ್ಬೆ ಹೇಳಿದ್ದಾರೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಾಸ್ಕೋದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಸಭೆ ನಡೆಸಿದ ಬೆನ್ನಲ್ಲೇ ಅಮೆರಿಕದ ಈ ಹೇಳಿಕೆ ಅಚ್ಚರಿ ಮೂಡಿಸಿದೆ.