Publish Date: Sat, 16 Dec 2023 (13:40 IST)
Updated Date: Sat, 16 Dec 2023 (13:41 IST)
ನಾನು ಯಾರಿಗೂ ಹೆದರುವುದಿಲ್ಲ. ಮೋದಿ ಅಧಿಕಾರದಲ್ಲಿರುವುದರಿಂದ ನನ್ನನ್ನು ಜೈಲಿಗೆ ಕಳುಹಿಸಬಹುದು. ಆದರೆ ನಮ್ಮನ್ನು ಮಣಿಸಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜಕೀಯ ಪಕ್ಷಗಳನ್ನು ಬೆದರಿಸುತ್ತಿದ್ದಾರೆ. ಅವರಿಗೆ ತಾಕತ್ತಿದ್ರೆ ನನ್ನನ್ನು ಜೈಲಿಗೆ ಕಳುಹಿಸಲಿ. ಆದರೆ, ಕೇಂದ್ರ ಸರಕಾರದ ಅನೀತಿಗಳ ಮುಂದೆ ತಲೆಬಾಗುವುದಿಲ್ಲ ಎಂದು ಗುಡುಗಿದ್ದಾರೆ.
ಕೇಂದ್ರ ಸರಕಾರದ ಕುರಿತಂತೆ ತೃಣಮೂಲ ಕಾಂಗ್ರೆಸ್ ಹೋರಾಟ ನಡೆಸುತ್ತಿದ್ದಂತೆ ಕೋಲ್ಕತಾದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಚಿಟ್ ಫಂಡ್ ಹಗರಣವನ್ನು ಎತ್ತಿದ್ದಾರೆ. ಪ್ರಧಾನಿ ದೇಶದ ವಿಷಯಗಳ ಬಗ್ಗೆ ಗಂಭೀರವಾಗಿರಬೇಕು ಎಂದು ಸಲಹೆ ನೀಡಿದರು.
ಪ್ರಧಾನಿ ಮೋದಿ ವಿಪಕ್ಷಗಳನ್ನು ಬೆದರಿಸುತ್ತಿದ್ದಾರೆ. ಇಂತಹ ಕೇಂದ್ರ ಸರಕಾರವನ್ನು ನಾವು ಯಾವತ್ತೂ ನೋಡಿರಲಿಲ್ಲ. ಪ್ರಧಾನಿಗೆ ಗಂಭೀರತೆಯ ಕೊರತೆಯಿದೆ ಎಂದು ಲೇವಡಿ ಮಾಡಿದ್ದಾರೆ.
ಕೆಲ ರಾಜಕೀಯ ಪಕ್ಷಗಳು ಕೇಂದ್ರ ಸರಕಾರದ ನಿಲುವುಗಳ ಕುರಿತಂತೆ ಮೌನವಾಗಿವೆ. ಯಾಕೆಂದರೆ ಮೋದಿ ಆಯಾ ಪಕ್ಷಗಳನ್ನು ಪ್ರತಿನಿತ್ಯ ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.