Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ರಾಜಸ್ಥಾನ್: ಅತ್ಯಾಚಾರ ಮತ್ತು ಕೊಲೆ ಪ್ರಕರಣವೊಂದರ ಮರಣೋತ್ತರ ಪರೀಕ್ಷೆ ಓದಿದ ಪೊಲೀಸರೇ ಬೆಚ್ಚಿಬಿದ್ದ ಘಟನೆ ನಡೆದಿದೆ.
ರಾಜಸ್ಥಾನ್ ನಲ್ಲಿ ಡಿಸೆಂಬರ್ 23 ರಂದು ಬುಡಕಟ್ಟು ಜನಾಂಗಕ್ಕೆ ಸೇರಿದ 16 ವರ್ಷ ಅಪ್ರಾಪ್ತೆಯನ್ನು ಕಾಮುಕನೊಬ್ಬ ಅತ್ಯಾಚಾರ ನಡೆಸಿ ಮತ್ತು ಕೊಲೆ ಮಾಡಿದ್ದ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಈ ವರದಿಯಲ್ಲಿ ಆರೋಪಿ ಸಂತ್ರಸ್ತೆ ಅತ್ಯಾಚಾರವಾಗುತ್ತಿದ್ದಾಗ ಮೃತಪಟ್ಟಿದ್ದಳು. ಮೃತಪಟ್ಟ ನಂತರವೂ ಆಕೆ ಮೇಲೆ ಅತ್ಯಾಚಾರ ನಡೆಸಿದ್ದ ಎಂದು ಬಯಲಾಗಿದೆ. ಸಂತ್ರಸ್ತೆಯ ಖಾಸಗಿ ಅಂಗಾಂಗದ ಮೇಲೆ 30 ಕ್ಕೂ ಹೆಚ್ಚು ಗಾಯಗಳಾಗಿವೆ. ಆಕೆಯ ಮೈ ತುಂಬಾ ಗಾಯಗಳಾಗಿತ್ತು. ನನ್ನ ಸರ್ವಿಸ್ ನಲ್ಲಿಯೇ ಇಂತಹ ಭೀಕರ ಅತ್ಯಾಚಾರ ನೋಡಿರಲಿಲ್ಲ ಎಂದು ಅಲ್ಲಿನ ಎಸ್.ಪಿ. ಜೈ ಯಾದವ್ ಹೇಳಿದ್ದಾರೆ. ಇದೀಗ ಆಪಾದಿತನನ್ನು ಬಂಧಿಸಲಾಗಿದೆ.