Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚೆನ್ನೈ: ಹೆಂಡತಿ ಜೊತೆಗೆ ವೈಮನಸ್ಯದಿಂದಾಗಿ ಪತಿ ಮಹಾಶಯ ಆಕೆ ಮತ್ತು ಇಬ್ಬರು ಪುತ್ರರನ್ನು ಕೊಲೆ ಮಾಡಿದ್ದಲ್ಲದೆ, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಸಾಲದ ವಿಚಾರವಾಗಿ ಪತಿ-ಪತ್ನಿಗೆ ಸದಾ ಜಗಳವಾಗುತ್ತಿತ್ತು. ಕಳೆದ ಮೂರು ತಿಂಗಳಿನಿಂದ ಪತಿ ಕೆಲಸಕ್ಕೂ ಹೋಗುತ್ತಿರಲಿಲ್ಲ. ಇದೇ ಕಾರಣಕ್ಕೆ ಮನೆಯಲ್ಲಿ ಜಗಳ ತಾರಕಕ್ಕೇರಿತ್ತು.
ಇದರಿಂದಾಗಿ ತಾವು ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ ನಲ್ಲಿಯೇ ಹೆಂಡತಿ ಮಕ್ಕಳನ್ನು ಕೊಂದ ಗಂಡ ತಾನೂ ನೇಣಿಗೆ ಶರಣಾಗಿದ್ದಾನೆ. ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಬಾಗಿಲು ಒಡೆದು ನೋಡಿದಾಗ ವಿಚಾರ ಬೆಳಕಿಗೆ ಬಂದಿದೆ.