Publish Date: Mon, 21 Sep 2020 (09:12 IST)
Updated Date: Mon, 21 Sep 2020 (09:14 IST)
ನವದೆಹಲಿ : ದೆಹಲಿಯ ಇಂಡಿಯಾ ಗೇಟ್ ಳಿಯ ಪಂಚತಾರಾ ಹೋಟೆಲ್ ನಲ್ಲಿ ತನ್ನ ಮೇಲೆ ಮಾನಭಂಗ ನಡೆದಿದೆ ಎಂದು ಟೂರಿಸ್ಟ್ ಗೈಡ್ ಒಒ್ಬಳು ಆರೋಪಿಸಿದ್ದಾಳೆ.
ಮಹಿಳೆ ಟೂರಿಸ್ಟ್ ಗೈಡ್ ಹಾಗೂ ಟಿಕೆಟ್ ಬುಕಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದು, ಆಕೆಗೆ ಹಣದ ಅವಶ್ಯಕತೆ ಇರುವುದನ್ನು ತಿಳಿದ 6 ಮಂದಿ ಪುರುಷರು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ಹೇಳಿ ಆಕೆಯನ್ನು ಹೋಟೆಲ್ ಗೆ ಕರೆದು ಮಾನಭಂಗ ಎಸಗಿದ್ದಾರೆ.
ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.