ನವದೆಹಲಿ : ರಾಜ್ಯ ಸಭೆಯಲ್ಲಿ ನಾಳೆ ಕೃಷಿ ಕ್ಷೇತ್ರದ 3 ವಿಧೇಯಕಗಳನ್ನು ಮಂಡನೆ ಮಾಡಲಾಗುವುದು.
ಚರ್ಚೆಯ ಬಳಿಕ ಅಂಗೀಕಾರಕ್ಕೆ ಕೇಂದ್ರ ಸರ್ಕಾರದ ನಿರ್ಧಾರ ಮಾಡಿದ್ದು, ಈಗಾಗಲೇ ಲೋಕಸಭೆಯಲ್ಲಿ ಈ ವಿಧೇಯಕ ಅಂಗೀಕಾರವಾಗಿದೆ. ನಾಳೆ ರಾಜ್ಯ ಸಭೆಯಲ್ಲಿ ಇದನ್ನು ಮಂಡಿಸಲಾಗುವುದು.
ವಿಧೇಯಕ ವಿರೋಧಿಸಿ 2 ರಾಜ್ಯಗಳಲ್ಲಿ ರೈತರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣದಲ್ಲಿ ರೈತರು ಈ ವಿದೇಯಕದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಧರಣಿಗೆ ಸೊಪ್ಪು ಹಾಕದೆ ವಿಧೇಯಕ ಅಂಗೀಕಾರಕ್ಕೆ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.