ಕೊಯಮತ್ತೂರು : ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಮಾನಭಂಗ ಎಸಗಿದ ಆರೋಪಿಯನ್ನು ಮನೆಯ ಸಾಕು ನಾಯಿ ಹಿಡಿದುಕೊಟ್ಟ ಕುತೂಹಲಕಾರಿ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ.
ಆರೋಪಿ ಚಿನ್ನದ ವ್ಯಾಪಾರಿಯಾಗಿದ್ದಾನೆ. ಮಹಿಳೆ ಮಾನಸಿಕ ಅಸ್ವಸ್ಥೆಯಾಗಿದ್ದು, ಮನೆಯ ಹೊರಗಿನ ಶೆಡ್ ನಲ್ಲಿ ವಾಸಿಸುತ್ತಿದ್ದರೆ, ಕುಟುಂಬದವರು ಮನೆಯೊಳಗೆ ನೆಲೆಸಿದ್ದರು. ಈ ವಿಚಾರ ತಿಳಿದಿದ್ದ ಆರೋಪಿ ರಾತ್ರಿ ಶೆಡ್ ಗೆ ನುಗ್ಗಿ ಆಕೆಯ ಮೇಲೆ ಮಾನಭಂಗ ಎಸಗಿ ಪರಾರಿಯಾಗಲು ಯತ್ನಿಸಿದ್ದಾನೆ. ಆ ವೇಳೆ ನಾಯಿ ಆತನನ್ನು ಅಡ್ಡಗಟ್ಟಿದೆ.
ಬಳಿಕ ಮನೆಯವರು ಬಂದು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಮೊಬೈಲ್ ನಲ್ಲಿ ಸಂತ್ರಸ್ತೆಯೊಂದಿಗಿನ ಅಶ್ಲೀಲ ವಿಡಿಯೋವನ್ನು ಶೂಟ್ ಮಾಡಿದ್ದ. ಇದನ್ನು ಪೊಲೀಸರು ವಶಪಡಿಸಿಕೊಂಡು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎನ್ನಲಾಗಿದೆ.