Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ತ್ರಿಪುರ: ಹೋಲಿ ಹಬ್ಬದ ವೇಳೆ ಇಬ್ಬರು ಅಪ್ರಾಪ್ರ ಹುಡುಗಿಯರ ಮೇಲೆ 19 ಮತ್ತು 23 ವರ್ಷದೊಳಗಿನ 8 ಮಂದಿ ಯುವಕರು ಸೇರಿ ಸಾಮೂಹಿಕ ಮಾನಭಂಗ ಎಸಗಿದ ಘಟನೆ ತ್ರಿಪುರದ ಖೋವಾಯ್ ಜಿಲ್ಲೆಯಲ್ಲಿ ನಡೆದಿದೆ.
ಇಬ್ಬರು ಹುಡುಗಿಯರು ಯುವಕರೊಂದಿಗೆ ಹೋಲಿ ಹಬ್ಬವನ್ನು ಆಚರಣೆ ಮಾಡಿದ್ದಾರೆ, ಆ ವೇಳೆ 8 ಮಂದಿ ಯುವಕರು ಸೇರಿ ಅವರನ್ನು ಕಾಡಿಗೆ ಕರೆದೊಯ್ದು ರಾತ್ರಿಯಿಡಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳಿಕ ಅವರು ಸತ್ತರೆಂದು ಭಾವಿಸಿ ಹೊರಟು ಹೋಗಿದ್ದಾರೆ.
ಎಚ್ಚರಗೊಂಡು ಮನೆಗೆ ಬಂದ ಹುಡುಗಿಯರು ನಡೆದ ಘಟನೆಯನ್ನು ಮನೆಯವರಿಗೆ ತಿಳಿಸಿದ ಹಿನ್ನಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸಿ 8 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅವರು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.