Publish Date: Tue, 09 Feb 2021 (09:14 IST)
Updated Date: Tue, 09 Feb 2021 (09:16 IST)
ಬೆಂಗಳೂರು : ಯುವಕನೊಬ್ಬ ಯುವತಿಯ ಪರಿಚಯ ಮಾಡಿಕೊಂಡು ಆಕೆಯ ನಗ್ನ ಫೋಟೊ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎಂದು ಯುವತಿಯ ತಾಯಿ ಆರೋಪಿಸಿದ್ದಾಳೆ.
ಯುವಕ ತನ್ನ ಮಗಳನ್ನು ಇನ್ ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡು ಆಕೆಯ ಅಶ್ಲೀಲ ಫೋಟೊಗಳನ್ನು ಕಳುಹಿಸುವಂತೆ ಒತ್ತಾಯಿಸಿದ್ದಾನೆ. ಇಲ್ಲವಾದರೆ ಆಕೆಯ ಕೈಯನ್ನು ಮುರಿಯುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ಥೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.