ಉತ್ತರ ಪ್ರದೇಶ : 15 ವರ್ಷದ ಹುಡುಗಿಯ ಮೇಲೆ ಯುವಕನೊಬ್ಬ ಮಾನಭಂಗ ಎಸಗಿದ ಘಟನೆ ಉತ್ತರ ಪ್ರದೇಶದಲ್ಲಿ ಶಹಜಹಾನ್ಪುರ ಜಿಲ್ಲೆಯಲ್ಲಿ ನಡೆದಿದೆ.
ಹುಡುಗಿ ಮೂತ್ರ ವಿಸರ್ಜನೆಗೆ ಹೋದಾಗ ಹಳ್ಳಿಯ ಯುವಕನೊಬ್ಬ ಆಕೆಯನ್ನು ಹಿಡಿದು ಬಲವಂತವಾಗಿ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಮಾನಭಂಗ ಎಸಗಿದ್ದಾನೆ. ಈ ಬಗ್ಗೆ ತಂದೆ ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.