Publish Date: Tue, 02 Feb 2021 (10:54 IST)
Updated Date: Tue, 02 Feb 2021 (10:57 IST)
ಬಿಹಾರ : ತಾಯಿಯ ಮಡಿಲಿನಲ್ಲಿ ಮಲಗಿದ್ದ 3 ತಿಂಗಳ ಹೆಣ್ಣು ಮಗುವನ್ನು ವ್ಯಕ್ತಿಯೊಬ್ಬ ಬೆಂಕಿಗೆ ಎಸೆದ ಘಟನೆ ಬಿಹಾರದ ಜಿಲ್ಲೆಯೊಂದರಲ್ಲಿ ನಡೆದಿದೆ.
ಮಹಿಳೆ ಮಡಿಲಿನಲ್ಲಿ ಮಗುವನ್ನು ಎತ್ತಿಕೊಂಡು ಮನೆಯ ಹೊರಗೆ ಕುಳಿತಿದ್ದಾಗ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದಕ್ಕೆ ಆಕೆ ವಿರೋಧಿಸಿದ್ದಾಳೆ. ಇದರಿಂದ ಕೋಪಗೊಂಡ ವ್ಯಕ್ತಿ ಆಕೆಯ ಮಡಿಲಿನಲ್ಲಿದ್ದ ಮಗುವನ್ನು ಎತ್ತಿ ಬೆಂಕಿಗೆ ಎಸೆದಿದ್ದಾನೆ. ಮಗುವಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.