ಬೆಂಗಳೂರು : ತಾಯಿಯಾಗಬೇಕು ಎಂಬುದು ಹೆಣ್ಣುಮಕ್ಕಳ ಬಯಕೆಯಾಗಿರುತ್ತದೆ. ಆರೆ ಕೆಲವು ಮಹಿಳೆಯರಿಗೆ ಬಂಜೆತನದ ಸಮಸ್ಯೆ ಕಾಡುತ್ತದೆ. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ಥೈರಾಯ್ಡ್ ಸಮಸ್ಯೆ ಕೂಡ ಮಹಿಳೆಯರಿಗೆ ಮಕ್ಕಳಾಗುವ ಭಾಗ್ಯವನ್ನು ದೂರಮಾಡುತ್ತದೆ. ಹಾಗಾಗಿ ಥೈರಾಯ್ಡ್ ಲಕ್ಷಣಗಳನ್ನು ತಿಳಿದು ಅದಕ್ಕೆ ಸೂಕ್ತವಾದ ಚಿಕಿತ್ಸೆ ಪಡೆಯಿರಿ.
ಹೈಪೋಥೈರಾಯ್ಡಿಸಮ್ ನ್ನು ಈ ಲಕ್ಷಣಗಳಿಂದ ತಿಳಿಯಬಹುದು:
ಆಯಾಸ, ಕಳಪೆ ಏಕಾಗ್ರತೆ, ಒಣ ಚರ್ಮ, ಮಲಬದ್ಧತೆ, ಶೀತ ಭಾವನೆ, ಹೆಚ್ಚು ನೀರು ಸೇವನೆ, ಕೀಲು, ಸ್ನಾಯ ನೋವು, ಖಿನ್ನತೆ, ಅತಿಯಾದ ಮುಟ್ಟಿನ ರಕ್ತಸ್ರಾವ.
ಹೈಪರ್ ಥೈರಾಯ್ಡಿಸಮ್ ಅನ್ನು ಈ ಲಕ್ಷಣಗಳಿಂದ ತಿಳಿಯಬಹುದು:
ನಡುಕ, ಹೆದರಿಕೆ, ವೇಗದ ಹೃದಯ ಬಡಿತ, ಆಯಾಸ, ಕರುಳಿನ ಚಲನೆ ಹೆಚ್ಚಳ, ಅತಿಯಾಗಿ ಬೆವರುವುದು, ತೂಕ ಇಳಿಕೆ, ಕಳಪೆ ಏಕಾಗ್ರತೆ.