Publish Date: Thu, 01 Apr 2021 (09:20 IST)
Updated Date: Thu, 01 Apr 2021 (09:22 IST)
ಪುಣೆ : 68 ವರ್ಷದ ವ್ಯಕ್ತಿಯೊಬ್ಬ ಅಪ್ರಾಪ್ತ ಹುಡುಗಿಯ ಮೇಲೆ ಮಾನಭಂಗ ಎಸಗಿದ ಘಟನೆ ಮಹಾರಾಷ್ಟ್ರದ ಪುಣೆಯ ಪ್ರದೇಶವೊಂದರಲ್ಲಿ ನಡೆದಿದೆ.
ಸಂತ್ರಸ್ತೆಯ ಹೆತ್ತವರು ಕೆಲಸಕ್ಕೆ ಹೋದಾಗ ಪಕ್ಕದಮನೆಗೆ ಬಂದಿದ್ದ ಸಂತ್ರಸ್ತೆಗೆ ವ್ಯಕ್ತಿಯೊಬ್ಬ ಚಾಕೋಲೇಟ್ ಮತ್ತು ಹಣವನ್ನು ನೀಡುವ ನೆಪದಲ್ಲಿ ಸ್ಥಳೀಯ ಕಟ್ಟಡದ ಹಿಂದಿನ ಸ್ಥಳಕ್ಕೆ ಕರೆದೊಯ್ದು ಮಾನಭಂಗ ಎಸಗಿದ್ದಾನೆ. ಮತ್ತು ಈ ವಿಚಾರವನ್ನು ಯಾರಿಗೂ ತಿಳಿಸಬಾರದೆಂದು ಬೆದರಿಕೆ ಹಾಕಿದ್ದಾನೆ.
ಆದರೆ ಹುಡುಗಿ ಈ ಬಗ್ಗೆ ತನ್ನ ಹೆತ್ತವರಿಗೆ ತಿಳಿಸಿದ ಹಿನ್ನಲೆಯಲ್ಲಿ ತಾಯಿ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.